ಮಿಸ್ ಸೌತ್ ಆಫ್ರಿಕಾ ಮುಡಿಗೆ 2017ರ ಮಿಸ್ ಯೂನಿವರ್ಸ್ ಗರಿ
2017ನೇ ಸಾಲಿನ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮಿಸ್ ಸೌತ್ ಆಫ್ರಿಕಾ ಸುಂದರಿ ಡೆಮಿ ಲೀ ನೆಲ್ ಪೀಟರ್ಸ್ ಮಿಸ್ ಯೂನಿವರ್ಸ್ ಮುಡಿಗೇರಿಸಿಕೊಂಡಿದ್ದಾರೆ.

Published On :
ಕೊಲಂಬೋ: 2017ನೇ ಸಾಲಿನ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮಿಸ್ ಸೌತ್ ಆಫ್ರಿಕಾ ಸುಂದರಿ ಡೆಮಿ ಲೀ ನೆಲ್ ಪೀಟರ್ಸ್ ಮಿಸ್ ಯೂನಿವರ್ಸ್ ಮುಡಿಗೇರಿಸಿಕೊಂಡಿದ್ದಾರೆ.
ಶ್ರೀಲಂಕಾದ ಕೊಲಂಬೋದಲ್ಲಿ ನಡೆಯುತ್ತಿರುವ 2017ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ದಕ್ಷಿಣ ಆಫ್ರಿಕಾ ಸುಂದರಿ ಸ್ಪರ್ಧೆಯಲ್ಲಿ ಜಯಗಳಿಸುವ ಮೂಲಕ ಈ ಕೀರ್ತಿಗೆ ಭಾಜನರಾಗಿದ್ದಾರೆ. ಇನ್ನು ಸ್ಪರ್ಧೆಯಲ್ಲಿ ಭಾರತದ ಶ್ರದ್ಧಾ ಶ್ರೀಧರ್ ಕಣದಲ್ಲಿದ್ದರಾದರೂ, ಟಾಪ್ 16ರ ಪಟ್ಟಿಗೆ ಪ್ರವೇಶ ಪಡೆಯುವಲ್ಲಿ ವಿಫಲರಾದರು. ಆ ಮೂಲಕ ಮತ್ತೆ ಭಾರತ ಮಿಸ್ ಯೂನಿವರ್ಸ್ ಕನಸು ಭಗ್ನಗೊಂಡಿತು.
ಇನ್ನು ಸ್ಪರ್ಧೆಯಲ್ಲಿ ಕೊಲಂಬಿಯಾ ಮೂಲದ ನಟಿ ಲಾರಾ ಗೊನ್ಜಾಲೆಜ್ ಮತ್ತು ಜಮೈಕಾದ ಡೇವಿನಾ ಬೆನೆಟ್ ಅವರು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡರು. ಇನ್ನು ಮಿಸ್ ಯೂನಿವರ್ಸ್ ಆಗಿ ಡೆಮಿ ಲೀ ನೆಲ್ ಪೀಟರ್ಸ್ ಆಯ್ಕೆಯಾದ ವಿಚಾರವನ್ನು ಮಿಸ್ ಯೂನಿವರ್ಸ್ ಸ್ಪರ್ಧೆ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ. ಸ್ಪರ್ಧೆಯಲ್ಲಿ ಒಟ್ಟು 92 ಸ್ಪರ್ಧಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ColombiaಕೊಲಂಬಿಯಾMiss Universe 2017Miss South AfricaDemi-Leigh Nel-Petersಮಿಸ್ ಯೂನಿವರ್ಸ್ 2017ಮಿಸ್ ದಕ್ಷಿಣ ಆಫ್ರಿಕಾಡೆಮಿ ಲೀ ನೆಲ್ ಪೀಟರ್ಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


