ಸಂಗೀತಗಾರ, ಗೀತೆ ಬರಹಗಾರ ಗ್ರೆಗ್ ಅಲ್ಮಾನ್ ನಿಧನ
ಅಮೆರಿಕಾದ ಪ್ರಖ್ಯಾತ ಸಂಗೀತಗಾರ, ಹಾಡುಗಾರ ಮತ್ತು ಗೀತೆ ಬರಹಗಾರ, ಅಲ್ಮನ್ ಬ್ರದರ್ಸ್...

Published On :
ವಾಷಿಂಗ್ಟನ್: ಅಮೆರಿಕಾದ ಪ್ರಖ್ಯಾತ ಸಂಗೀತಗಾರ, ಹಾಡುಗಾರ ಮತ್ತು ಗೀತೆ ಬರಹಗಾರ, ಅಲ್ಮನ್ ಬ್ರದರ್ಸ್ ಬ್ಯಾಂಡ್ ನ ಸಹ ಸಂಸ್ಥಾಪಕ ಗ್ರೆಗೊರಿ ಲೆನೊಯ್ರ್ ಅಲ್ಲ್ಮ್ಯಾನ್ ನಿನ್ನೆ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
ಜಾರ್ಜಿಯಾದ ಸವನ್ನಾದಲ್ಲಿರುವ ಅವರ ನಿವಾಸದಲ್ಲಿ ಅಲ್ಮ್ಯಾನ್ ನಿಧನರಾಗಿದ್ದಾರೆ ಎಂದು ಅವರ ವೆಬ್ ಸೈಟ್ ನಲ್ಲಿ ನೀಡಲಾದ ಮಾಹಿತಿಯಿಂದ ತಿಳಿದುಬಂದಿದೆ.
ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಕಳೆದ ಅನೇಕ ವರ್ಷಗಳಿಂದ ಅವರು ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ವೆಬ್ ಸೈಟ್ ನಲ್ಲಿ ಮಾಹಿತಿ ದೊರಕಿದೆ.
ಕೀಬೋರ್ಡ್ ಮತ್ತು ಗಿಟಾರ್ ನುಡಿಸುತ್ತಿದ್ದ ಅಲ್ಲ್ಮ್ಯಾನ್ ಗೆ 1999ರಲ್ಲಿ ಹೆಪಟೈಟಿಸ್ ಸಿ ಇದೆ ಎಂದು ಗೊತ್ತಾಗಿತ್ತು. 2010ರಲ್ಲಿ ಲಿವರ್ ಟ್ರಾನ್ಪ್ಲ್ಯಾಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಬಿಲ್ ಬೋರ್ಡ್ ತನ್ನ ವೆಬ್ ಸೈಟ್ ನಲ್ಲಿ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


