ವಿದೇಶ

ಅತೀ ಹೆಚ್ಚು ಜನಸಂಖ್ಯೆ: ಚೀನಾ ಅಲ್ಲ ಭಾರತವೇ ಮೊದಲು!

ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಚೀನಾ ಅಲ್ಲ... ಬದಲಿಗೆ ಭಾರತ ಎಂದು ಸಂಶೋಧಕರೊಬ್ಬರು ಹೇಳಿದ್ದಾರೆ.

ಅತೀ ಹೆಚ್ಚು ಜನಸಂಖ್ಯೆ: ಚೀನಾ ಅಲ್ಲ ಭಾರತವೇ ಮೊದಲು!
ಸಂಗ್ರಹ ಚಿತ್ರ
Published On :

ನವದೆಹಲಿ: ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಚೀನಾ ಅಲ್ಲ... ಬದಲಿಗೆ ಭಾರತ ಎಂದು ಸಂಶೋಧಕರೊಬ್ಬರು ಹೇಳಿದ್ದಾರೆ.

ಹೌದು..ದಶಕಗಳ ಕಾಲ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎಂಬ ಖ್ಯಾತಿ ಪಡೆದಿದ್ದ ಚೀನಾ ಇದೀಗ ಆ ಕೊಂಡಿ ಕಳಚಿಕೊಂಡಿದ್ದು, ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ ಎಂದು  ಸಂಶೋಧಕರೊಬ್ಬರು ಹೇಳಿದ್ದಾರೆ. ಅಮೆರಿಕದ ಖ್ಯಾತ ವಿಸ್ಕಿನ್ಸನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ಸಂಶೋಧಕ ಯಿ ಫುಕ್ಸಿಯಾನ್ ಎಂಬುವವರು ಇಂತಹುದೊಂದು ವಾದ ಮಂಡಿಸಿದ್ದು, ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ  ರಾಷ್ಟ್ರ ಚೀನಾ ಅಲ್ಲ ಬದಲಿಗೆ ಭಾರತ ಎಂದು ತಮ್ಮ ವಾದ ಮಂಡಿಸಿದ್ದಾರೆ.

ಇತ್ತೀಚೆಗೆ ಚೀನಾದ ಪೆಕಿಂಗ್ ವಿಶ್ವವಿದ್ಯಾಲಯದಲ್ಲಿ ನಡೆದ ವಿಶೇಷ ವಿಚಾರಸಂಕಿರಣದಲ್ಲಿ ಪಾಲ್ಗೊಂಡಿದ್ದ ಅವರು, ಚೀನಾ ದೇಶದಲ್ಲಿ 1991 ರಿಂದ 2016 ರ ಅವಧಿಯಲ್ಲಿ 377.6 ಮಿಲಿಯನ್ ಮಕ್ಕಳು ಜನಿಸಿದೆ. ಆದರೆ ಅಧಿಕೃತ  ದಾಖಲೆಗಳಲ್ಲಿ ಈ ಸಂಖ್ಯೆಯನ್ನು 464.8 ಮಿಲಿಯನ್ ಎಂದು ತೋರಿಸಲಾಗಿದೆ. ಈ ಅಂಕಿ ಅಂಶಗಳ ಪ್ರಕಾರ ಪ್ರಸ್ತುತ ಇರುವ ಚೀನಾ ಜನಸಂಖ್ಯೆ1.38 ಬಿಲಿಯನ್ ಎಂಬುದು ತಪ್ಪು ವಾದವಾಗಿದೆ. ಈ ಅಂಕಿಗಳ ಅಂಶಗಳಲ್ಲಿ 90  ಮಿಲಿಯನ್ ಸಂಖ್ಯೆ ಕಡಿತವಾಗಬೇಕಿದ್ದು, ನೈಜ ಅಂಕಿ ಅಂಶಗಳ ಪ್ರಕಾರ ಚೀನಾ ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಲ್ಲ ಎಂದು ಅವರು ಹೇಳಿದ್ದಾರೆ.

ನನ್ನ ಪ್ರಕಾರ ಚೀನಾದಲ್ಲಿ 1.29 ಬಿಲಿಯನ್ ಜನಸಂಖ್ಯೆ ಇದ್ದು, ಭಾರತದಲ್ಲಿ 1.32 ಬಿಲಿಯನ್ ಜನಸಂಖ್ಯೆ ಇದೆ. ಹೀಗಾಗಿ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಭಾರತ ಎಂದು ಫುಕ್ಸಿಯನ್ ವಾದಿಸಿದ್ದಾರೆ.  ಅಂತೆಯೇ ಚೀನಿ ಪ್ರಜೆಗಳು ಕಳೆದ 2 ದಶಕಗಳಲ್ಲಿ ಅಳವಡಿಸಿಕೊಂಡಿರುವ ಕುಟುಂಬ ನಿಯಂತ್ರಣ ಯೋಜನೆಗಳಿಂದಾಗಿ ಚೀನಾದಲ್ಲಿ ಜನಸಂಖ್ಯಾ ಏರಿಕೆ ಗತಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದೂ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.