ವಿದೇಶ

ಎರಡನೆ ಬಾರಿ ಇರಾನ್‌ ಅಧ್ಯಕ್ಷರಾಗಿ ಹಸನ್‌ ರೌಹಾನಿ ಆಯ್ಕೆ

ಇರಾನ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಹಸನ್‌ ರೌಹಾನಿ ಅವರು ಭರ್ಜರಿ ಗೆಲುವು ಸಾಧಿಸುವ ಮೂಲಕ ಎರಡನೇ....

ಎರಡನೆ ಬಾರಿ ಇರಾನ್‌ ಅಧ್ಯಕ್ಷರಾಗಿ ಹಸನ್‌ ರೌಹಾನಿ ಆಯ್ಕೆ
ಹಸನ್‌ ರೌಹಾನಿ
Published On :
ಟೆಹರಾನ್‌: ಇರಾನ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಹಸನ್‌ ರೌಹಾನಿ ಅವರು ಭರ್ಜರಿ ಗೆಲುವು ಸಾಧಿಸುವ ಮೂಲಕ ಎರಡನೇ ಅವಧಿಗೆ ಅಧಿಕಾರದ ಗದ್ದುಗೆ ಏರಿದ್ದಾರೆ ಎಂದು ಇರಾನ್ ಸರ್ಕಾರಿ ಟಿವಿ ಶನಿವಾರ ಘೋಷಿಸಿದೆ. 
68 ವರ್ಷದ ಹಸನ್‌ ರೌಹಾನಿ ನಾಲ್ಕು ವರ್ಷಗಳ ಆಧಿಕಾರಾವಧಿಗೆ ಮರು ಆಯ್ಕೆಯಾಗಿದ್ದು, ದೇಶದ ಜನತೆಗೆ ಇನ್ನೂ ಹೆಚ್ಚಿನ ಸ್ವಾತಂತ್ರ್ಯ ಹಾಗೂ ದೇಶಕ್ಕೆ ಜಗದಗಲದ ಬಾಂಧವ್ಯವನ್ನು ಕಲ್ಪಿಸುವ ರೌಹಾನಿ ಅವರ ಕಾರ್ಯಸೂಚಿಯು ಈ ವಿಜಯದೊಂದಿಗೆ ಸಾಕಾರಗೊಳ್ಳಲಿದೆ ಎಂದು ಹೇಳಿದೆ.
ಇರಾನ್ ಸರ್ಕಾರಿ ಟಿವಿ, ಮತ ಎಣಿಕೆ ವಿವರಗಳ ಆಧಾರದ ಮೇಲೆ ಹಸನ್‌ ರೌಹಾನಿ ವಿಜಯಿಯೆಂದು ಘೋಷಿಸಿ, ಅವರನ್ನು ತನ್ನ ಸಂಕ್ಷಿಪ್ತ ಪ್ರಕಟಣೆಯಲ್ಲಿ ಅಭಿನಂದಿಸಿದೆ.
ಪ್ರಾಥಮಿಕ ಮತ ಎಣಿಕೆ ವಿವರಗಳ ಪ್ರಕಾರ ರೌಹಾನಿ ಅವರಿಗೆ 3.89 ಕೋಟಿ ಮತಗಳ ಪೈಕಿ  ಈ ತನಕ 2.28 ಕೋಟಿ ಮತಗಳು ಪ್ರಾಪ್ತವಾಗಿವೆ. ನಾಲ್ಕು ಕೋಟಿ ಜನರು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಿರುವುದಾಗಿ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.