ವಿಕಿಲೀಕ್ಸ್ ಸ್ಥಾಪಕ ಅಸಾಂಜೆ ಅತ್ಯಾಚಾರ ಪ್ರಕರಣದ ತನಿಖೆ ಕೈಬಿಟ್ಟ ಸ್ವೀಡನ್ ಪ್ರಾಸಿಕ್ಯೂಟರ್
ಸುಮಾರು ಏಳು ವರ್ಷಗಳ ನಂತರ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜೆ ವಿರುದ್ಧದ ಅತ್ಯಾಚಾರ ಪ್ರಕರಣದ...

Published On :
ಸ್ಟಾಕ್ಹೋಮ್: ಸುಮಾರು ಏಳು ವರ್ಷಗಳ ನಂತರ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜೆ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಯನ್ನು ತಾನು ಕೈಬಿಟ್ಟಿರುವುದಾಗಿ ಸ್ವೀಡನ್ ನ ಉನ್ನತ ಪ್ರಾಸಿಕ್ಯೂಟರ್ ಶುಕ್ರವಾರ ಹೇಳಿದ್ದಾರೆ.
ಅಸಾಂಜೆ ವಿರುದ್ಧದ ಅತ್ಯಾಚಾರ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಮುಂದುವರಿಸದಿರಲು ನಿರ್ಧರಿಸಿರುವುದಾಗಿ ಸ್ವೀಡನ್‌ನ ಚೀಫ್ ಪ್ರಾಸಿಕ್ಯೂಟರ್ ಮ್ಯಾರಿಯನ್ ನೈ ಅವರ ಕಾರ್ಯಾಲಯ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಏಳು ವರ್ಷಗಳಿಂದ ಚಾಲ್ತಿಯಲ್ಲಿರುವ ಅಸಾಂಜೆ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಯ ಕುರಿತಾಗಿ ಅಧಿಕಾರಿಗಳು ಮಾತನಾಡಲಿದ್ದಾರೆ ಎಂದು ಪ್ರಾಸಿಕ್ಯೂಟರ್ ಕಾರ್ಯಾಲಯ ಹೇಳಿದೆ. ಆದರೆ ಆ ಬಗ್ಗೆ ಹೆಚ್ಚಿನ ವಿವರಗಳನ್ನು ಅದು ನೀಡಿಲ್ಲ.
ಯುರೋಪ್ ನ ಅರೆಸ್ಟ್ ವಾರಂಟನ್ನು ಕೈಬಿಡುವಂತೆ ಸ್ವೀಡನ್ ಗೆ ಅಸಾಂಜೆ ವಕೀಲರು ಮನವಿ ಮಾಡಿಕೊಂಡಿರುವುದನ್ನು ಅನುಸರಿಸಿ ಸ್ವೀಡನ್ ಪ್ರಾಸಿಕ್ಯೂಟರ್ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Julian AssangeSwedish prosecutorrape investigationಸ್ವೀಡನ್ ಪ್ರಾಸಿಕ್ಯೂಟರ್ಅತ್ಯಾಚಾರ ಪ್ರಕರಣದ ತನಿಖೆಜೂಲಿಯನ್ ಅಸಾಂಜೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


