ಸಾರ್ವಜನಿಕರಿಗೆ ತೆರೆದುಕೊಳ್ಳಲಿರುವ ಅಮೆರಿಕ ಶ್ವೇತಭವನ ಚಿತ್ರಮಂದಿರ
ತನ್ನ ಅಸ್ತಿತ್ವದ ಇತಿಹಾಸದಲ್ಲಿ ಅಮೆರಿಕಾದ ಶ್ವೇತ ಭವನ, ಕಟ್ಟಡದ ಪೂರ್ವಭಾಗದಲ್ಲಿರುವ ಚಿತ್ರಮಂದಿರವನ್ನು ಮೊದಲ ಬಾರಿಗೆ ಸಾರ್ವಜನಿಕರಿಗೆ ಮುಕ್ತಗೊಳಿಸಿದೆ ಎಂದು ಮಾಧ್ಯಮವೊಂದು ವರದಿ

Published On :
ವಾಷಿಂಗ್ಟನ್: ತನ್ನ ಅಸ್ತಿತ್ವದ ಇತಿಹಾಸದಲ್ಲಿ ಅಮೆರಿಕಾದ ಶ್ವೇತ ಭವನ, ಕಟ್ಟಡದ ಪೂರ್ವಭಾಗದಲ್ಲಿರುವ ಚಿತ್ರಮಂದಿರವನ್ನು ಮೊದಲ ಬಾರಿಗೆ ಸಾರ್ವಜನಿಕರಿಗೆ ಮುಕ್ತಗೊಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
"ಶ್ವೇತಭವನ ಈ ದೇಶದ ಜನಕ್ಕೆ ಸೇರಿದೆ" ಎಂದು ಅಮೆರಿಕಾದ ಮೊದಲ ಮಹಿಳೆ ಮೆಲಾನಿಯ ಟ್ರಂಪ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಶ್ವೇತ ಭವನಕ್ಕೆ ಭೇಟಿ ಕೊಡುವ ಎಲ್ಲರಿಗು, ಅದರ ಸಂಪದ್ಭರಿತ ಇತಿಹಾಸ ಮತ್ತು ಅದ್ಭುತ ಸಂಪ್ರದಾಯ ಎಲ್ಲರಿಗು ಸಿಗುವಂತೆ ಆಗಬೇಕು" ಎಂದು ಟ್ರಂಪ್ ಹೇಳಿರುವುದಾಗಿ ದ ಹಿಲ್ ನಿಯತಕಾಲಿಕೆ ವರದಿ ಮಾಡಿದೆ.
ಮಾಜಿ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರ ಆಡಳಿತದಲ್ಲಿ ನಿರ್ಮಿಸಿದ್ದ ಈ ಚಿತ್ರಮಂದಿರವನ್ನು ೧೯೮೨ ಮತ್ತು ೧೯೮೩ ರ ನಡುವಿನಲ್ಲಿ ನವೀಕರಿಸಲಾಗಿತ್ತು.
ರಾಷ್ರಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರ ಕಾಲಾವಧಿಯಲ್ಲಿಯೂ ಇದನ್ನು ನವೀಕರಿಸಲಾಗಿತ್ತು.
ಅಧ್ಯಕ್ಷರ ಪ್ರಮುಖ ಭಾಷಣಗಳ ಪೂರ್ವಾಭ್ಯಾಸಕ್ಕೆ ಈ ಜಾಗವನ್ನು ಬಳಸಿಕೊಂಡರೂ, ಮೊದಲ ಕುಟುಂಬದ ಸಿನೆಮಾ ಚಟುವಟಿಕೆಗಳಿಗೆ ಇದನ್ನು ಬಳಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


