ಸಿರಿಯಾ ಕುರ್ದ್ ಸಮುದಾಯಕ್ಕೆ ಶಸ್ತ್ರಾಸ್ತ್ರ ಒದಗಿಸುವ ಅಮೆರಿಕ ಕ್ರಮವನ್ನು ಖಂಡಿಸಿದ ಟರ್ಕಿ
ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ವಿರುದ್ಧ ಹೋರಾಡಲು ಸಿರಿಯಾದಲ್ಲಿ ಕುರ್ದಿಶ್ ಯೋಧರಿಗೆ ಶಸ್ತಾಸ್ತ್ರಗಳನ್ನು ಒದಗಿಸುವ ಅಮೆರಿಕಾ ನಿರ್ಧಾರ ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಟರ್ಕಿ

Published On :
ಇಸ್ತಾಂಬುಲ್: ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ವಿರುದ್ಧ ಹೋರಾಡಲು ಸಿರಿಯಾದಲ್ಲಿ ಕುರ್ದಿಶ್ ಯೋಧರಿಗೆ ಶಸ್ತಾಸ್ತ್ರಗಳನ್ನು ಒದಗಿಸುವ ಅಮೆರಿಕಾ ನಿರ್ಧಾರ ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಟರ್ಕಿ ಉಪ ಪ್ರಧಾನಮಂತ್ರಿ ಬುಧವಾರ ಹೇಳಿದ್ದಾರೆ.
ಪೀಪಲ್ಸ್ ಪ್ರೊಟೆಕ್ಷನ್ ಯುನಿಟ್ಸ್ (ವೈ ಪಿ ಜಿ) ನಂತಹ ಸಂಸ್ಥೆಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವುದಾಗಿ ವಾಷಿಂಗ್ಟನ್ ಘೋಷಿಸಿತ್ತು. ಈ ಸಂಸ್ಥೆಯನ್ನು ಟರ್ಕಿ ಭಯೋತ್ಪಾದಕ ಸಂಘಟನೆಯೆಂದು ಪರಿಗಣಿಸುತ್ತದೆ.
"ಅವರು ಕೂಡ ಭಯೋತ್ಪಾದಕ ಸಂಸ್ಥೆ ಎಂದು ಗುರುತಿಸಿರುವ ವೈಪಿಜಿಗೆ ಶಸ್ತಾಸ್ತ್ರ ನೀಡುವ ಅಮೆರಿಕಾ ಕ್ರಮ ಪರಿಸ್ಥಿತಿಯನ್ನು ಬದಲಾಯಿಸುವುದಿಲ್ಲ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ಉಪಪ್ರಧಾನಿ ನುರೆಟ್ಟಿನ್ ಕ್ಯಾನಿಕಿ ಟರ್ಕಿಶ್ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
ಟರ್ಕಿ, ಅಮೆರಿಕಾ ಮತ್ತು ಯೂರೋಪಿಯನ್ ಗಣರಾಜ್ಯ ಭಯೋತ್ಪಾದಕ ಸಂಸ್ಥೆ ಎಂದು ಗುರುತಿಸರುವ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿಯ ಅಂಗಸಂಸ್ಥೆ ವೈಪಿಜಿ ಎಂದೇ ಅಂಕಾರ ಪರಿಗಣಿಸುತ್ತದೆ. ಆದರೆ ವೈಪಿಜಿಯನ್ನು ಭಯೋತ್ಪಾದಕ ಸಂಸ್ಥೆಯೆಂದು ಅಮೆರಿಕಾ ಆಗಲಿ ಯೂರೋಪ್ ಗಣರಾಜ್ಯವಾಗಲಿ ಘೋಷಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


