ಕಾಶ್ಮೀರದಲ್ಲಿ ಜಿಹಾದ್ ನಡೆಸಲು ಲಾಡೆನ್'ನಿಂದ ಹಣ ಪಡೆದಿದ್ದ ಷರೀಫ್: ಇಮ್ರಾನ್ ಖಾನ್
ಕಾಶ್ಮೀರದಲ್ಲಿ ಜಿಹಾದ್ ನಡೆಸುವ ಸಲುವಾಗಿ ಅಲ್ ಖೈದಾ ಉಗ್ರ ಒಸಾಮಾ ಬಿನ್ ಲಾಡೆನ್ ನಿಂದ ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಹಣ ಪಡೆದುಕೊಂಡಿದ್ದರು ಎಂದು ಪಾಕಿಸ್ತಾನದ ಪ್ರತಿಪಕ್ಷ ನಾಯಕ ಇಮ್ರಾನ್ ಖಾನ್...

Published On :
ಇಸ್ಲಾಮಾಬಾದ್: ಕಾಶ್ಮೀರದಲ್ಲಿ ಜಿಹಾದ್ ನಡೆಸುವ ಸಲುವಾಗಿ ಅಲ್ ಖೈದಾ ಉಗ್ರ ಒಸಾಮಾ ಬಿನ್ ಲಾಡೆನ್ ನಿಂದ ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಹಣ ಪಡೆದುಕೊಂಡಿದ್ದರು ಎಂದು ಪಾಕಿಸ್ತಾನದ ಪ್ರತಿಪಕ್ಷ ನಾಯಕ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಮಂಗಳವಾರ ಆರೋಪ ಮಾಡಿದೆ.
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪ್ರಧಾನಿ ಷರೀಫ್ ಅವರು ತಮ್ಮ ಹುದ್ದೆಗೆ ಕೂಡಲೇ ರಾಜೀನಾಮೆ ಸಲ್ಲಿಸಬೇಕೆಂದು ಇಮ್ರಾನ್ ಖಾನ್ ಬಹಳ ಹಿಂದಿನಿಂದಲೂ ಆಗ್ರಹಿಸುತ್ತಲೇ ಇದ್ದಾರೆ.
ಇದೀಗ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಷರೀಫ್ ವಿರುದ್ಧ ಮತ್ತೊಂದು ಆರೋಪ ಮಾಡಿದೆ. ದೇಶದ ವಿರುದ್ಧ ಸಂಚು ಮತ್ತು ಅಸ್ಥಿರಗೊಳಿಸುವುದಕ್ಕಾಗಿ ವಿದೇಶಿ ವ್ಯಕ್ತಿಯಿಂದ ಹಣ ಪಡೆದುದಕ್ಕಾಗಿ ಷರೀಫ್ ವಿರುದ್ಧ ಪ್ರಕರಣ ದಾಖಲಿಸಲು ಸುಪ್ರೀಂಕೋರ್ಟ್ ನಿಂದ ಅನುಮತಿ ಕೋರಿ ಅರ್ಜಿ ಸಲ್ಲಿಸುತ್ತೇನೆಂದು ಇಮ್ರಾನ್ ಖಾನ್ ಅವರ ಪಕ್ಷದ ವಕ್ತಾರ ಫವದ್ ಚೌಧರಿಯವರು ಹೇಳಿದ್ದಾರೆ.
ಖಾಲಿದ್ ಖವಾಜಾ: ಶಾಹೀದ್-ಇ-ಅಮಾನ್ ಎಂಬ ಪುಸ್ತಕದಲ್ಲಿನ ಕೆಲವು ಸಂದರ್ಶಗಳು ಹಾಗೂ ಉದ್ಧರಣಗಳ ಹೊರತಾಗಿ ಷರೀಫ್ ವಿರುದ್ಧದ ಆರೋಪಕ್ಕೆ ಪುಷ್ಟಿ ನೀಡಲು ಪಿಟಿಐ ಬಳಿ ಹೆಚ್ಚಿನ ಸಾಕ್ಷ್ಯಾಧಾರಗಳೇನೂ ಇಲ್ಲ. ಆದರೂ ಅಷ್ಟನ್ನೇ ಆಧಾರವನ್ನಾಗಿಟ್ಟುಕೊಂಡು ಷರೀಫ್ ವಿರುದ್ಧ ಸಮರ ಸಾರಲು ಪ್ರತಿಪಕ್ಷ ಪಿಟಿಐ ಮುಂದಾಗಿದೆ.
ಖಾಲಿದ್ ಖವಾಜಾ: ಶಾಹೀದ್-ಇ ಅಮಾನ್ ಪುಸ್ತಕವನ್ನು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ)ನ ಮಾಜಿ ಗುಪ್ತಚಾರ ಖಾಲಿದ್ ಖವಾಜಾ ಅವರ ಪತ್ನಿ ಶಮಾಮಾ ಖಾಲಿದ್ ಅವರು ಬರೆದಿದ್ದಾರೆ. ಖಾಲಿದ್ ಖವಾಜಾ ಅವರನ್ನು 2010ರಲ್ಲಿ ಪಾಕಿಸ್ತಾನದ ತಾಲಿಬಾನ್ ಉಗ್ರರು ಬರ್ಬರವಾಗಿ ಹತ್ಯೆ ಮಾಡಿದ್ದರು.
ಪುಸ್ತಕದಲ್ಲಿರುವ ಸಂದರ್ಶಗಳು ಮತ್ತು ಇನ್ನಿತರೆ ಕೆಲವು ವಿಚಾರಗಳನ್ನು ಗಮನಿಸಿದರೆ, ಕಾಶ್ಮೀರ ಮತ್ತು ಆಫ್ಘಾನಿಸ್ತಾನದಲ್ಲಿ ಜಿಹಾದ್ ಗೆ ಉತ್ತೇಜನ ನೀಡುವುದಕ್ಕಾಗಿ ಅಲ್'ಖೈದಾ ಉಗ್ರ ಸಂಘಟನೆಯ ಮಾಜಿ ಮುಖ್ಯಸ್ಥ ಲಾಡನೆ ನಿಂದ ಲಂಚದ ರೂಪದಲ್ಲಿ ನವಾಜ್ ಷರೀಫ್ ರೂ.150 ಕೋಟಿ ಪಡೆದಿದ್ದಾರೆಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಲಾಡೆನ್ ನಿಂದ ಪಡೆದ ರೂ.150 ಕೋಟಿಗಳಲ್ಲಿ ರೂ.27 ಕೋಟಿಯಷ್ಟು 1989ರಲ್ಲಿ ಭುಟ್ಟೋ ವಿರುದ್ಧ ಅವಿಶ್ವಾಸ ಗೊತ್ತುವಳಿಯ ಬೆಂಬಲಕ್ಕೆ ಬಳಲಾಗಿತ್ತು ಎಂದೂ ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Osama bin Ladenಇಮ್ರಾನ್ ಖಾನ್Imran KhanNawaz SharifPakistanಪಾಕಿಸ್ತಾನKashmirನವಾಜ್ ಷರೀಫ್moneyಕಾಶ್ಮೀರJihadಒಸಾಮಾ ಬಿನ್ ಲಾಡೆನ್ಜಿಹಾದ್ಹಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


