ವಿದೇಶ

ಗನ್ ತೋರಿಸಿ ಪಾಕ್ ಯುವಕನನ್ನು ಮದುವೆಯಾಗುವಂತೆ ಬೆದರಿಸಿದರು: ಭಾರತೀಯ ಯುವತಿ ಆರೋಪ

ಗನ್ ತೋರಿಸಿ ಬೆದರಿಕೆಯೊಡ್ಡಿ ಪಾಕಿಸ್ತಾನಿ ಮೂಲದ ವ್ಯಕ್ತಿ ಮದುವೆಯಾಗಿದ್ದು, ತನ್ನನ್ನು...

ಗನ್ ತೋರಿಸಿ ಪಾಕ್ ಯುವಕನನ್ನು ಮದುವೆಯಾಗುವಂತೆ ಬೆದರಿಸಿದರು: ಭಾರತೀಯ ಯುವತಿ ಆರೋಪ
ಭಾರತ ಮತ್ತು ಪಾಕಿಸ್ತಾನ ಧ್ವಜಗಳು
Published On :
ಇಸ್ಲಾಮಾಬಾದ್:ಗನ್ ತೋರಿಸಿ ಬೆದರಿಕೆಯೊಡ್ಡಿ ಪಾಕಿಸ್ತಾನಿ ಮೂಲದ ವ್ಯಕ್ತಿ ಮದುವೆಯಾಗಿದ್ದು, ತನ್ನನ್ನು ಭಾರತಕ್ಕೆ ಸುರಕ್ಷಿತವಾಗಿ ಹಿಂತಿರುಗಿಸಬೇಕೆಂದು 20 ವರ್ಷದ ಭಾರತೀಯ ಯುವತಿ ಪಾಕಿಸ್ತಾನದ ಭಾರತೀಯ ಹೈ ಕಮಿಷನ್ ಮೊರೆ ಹೋಗಿದ್ದಾರೆ.
ಇಸ್ಲಾಮಾಬಾದ್ ಕೋರ್ಟ್ ನಲ್ಲಿ ತನ್ನ ಪತಿ ತಾಹಿರ್ ಆಲಿ ವಿರುದ್ಧ ಮನವಿ ಸಲ್ಲಿಸಿರುವ ಉಸ್ಮಾ, ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡಿದ್ದಲ್ಲದೆ ತನ್ನ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಿಕೊಂಡಿದ್ದಾಳೆ.
ತನಗೆ ಗನ್ ತೋರಿಸಿ ಬೆದರಿಕೆಯೊಡ್ಡಿ ಆಲಿ ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಂಡರು. ನನ್ನ  ವಲಸೆ ದಾಖಲೆಗಳನ್ನು ಕಸಿದುಕೊಂಡಿದ್ದಾರೆ ಎಂದು ಹೇಳಿರುವುದಾಗಿ ಜಿಯೊ ನ್ಯೂಸ್ ವರದಿ ಮಾಡಿದೆ.
ದೆಹಲಿಯಲ್ಲಿರುವ ಪಾಕಿಸ್ತಾನ ಹೈ ಕಮಿಷನ್, ವೀಸಾ ವಿಭಾಗದಲ್ಲಿ ಉಸ್ಮಾ ವೀಸಾ ಪಡೆದುಕೊಂಡಿದ್ದಾಳೆ ಎಂದು ದಾಖಲೆಗಳು ಹೇಳುತ್ತವೆ ಎಂದು ಹೇಳಿದೆ.ಯುವತಿ ವೀಸಾಕ್ಕೆ ಅರ್ಜಿ ಸಲ್ಲಿಸುವಾಗ ಮದುವೆಯಾಗುವ ಯೋಜನೆಯನ್ನು ವ್ಯಕ್ತಪಡಿಸಿರಲಿಲ್ಲ. ಪಾಕಿಸ್ತಾನದಲ್ಲಿರುವ ಸಂಬಂಧಿಕರನ್ನು ಭೇಟಿ ಮಾಡಲು ಬಂದಿರುವುದಾಗಿ ಹೇಳಿದ್ದಳು ಎಂದು ಪಾಕಿಸ್ತಾನ ಅಧಿಕಾರಿಗಳು ಹೇಳುತ್ತಾರೆ.
ಆದರೆ ತಮ್ಮ ಪತ್ನಿಯನ್ನು ನಿಯೋಗದವರು ಬಂಧಿಸಿದ್ದಾರೆ ಎಂದು ಉಜ್ಮಾ ಪತಿ ಆಲಿ ಆರೋಪಿಸಿದ್ದಾರೆ.
ಉಜ್ಮಾ ಮತ್ತು ಆಲಿ ಮಲೇಷ್ಯಾದಲ್ಲಿ ಭೇಟಿಯಾಗಿ ಪರಿಚಯವಾಗಿ ನಂತರ ಅದು ಪ್ರೀತಿಗೆ ತಿರುಗಿತು. ನಂತರ ಉಜ್ಮಾ ಮೇ 1ರಂದು ಪಾಕಿಸ್ತಾನಕ್ಕೆ ವಾಘಾ ಗಡಿ ಮೂಲಕ ಹೋದಳು. ಅವರ ಮದುವೆ ಮೇ 3ರಂದು ನಡೆದಿದ್ದು. 
ಆದರೆ ಕಳೆದ ಶುಕ್ರವಾರ ಭಾರತೀಯ ಹೈ ಕಮಿಷನ್ ರನ್ನು ಭೇಟಿ ಮಾಡಲು ಹೋದಾಗ ಪರಿಸ್ಥಿತಿ ಬದಲಾಯಿತು. ಉಜ್ಮಾ ನಿಯೋಗದ ಕಟ್ಟಡದ ಒಳಗೆ ಹೋದವಳು ಹಿಂತಿರುಗಿ ಬರಲಿಲ್ಲ ಎಂದು ಆಕೆಯ ಪತಿ ಹೇಳುತ್ತಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.