ವಿದೇಶ

20 ಸಾವಿರ ಅಕ್ರಮ ವಲಸಿಗ ಭಾರತೀಯರು ಸೌದಿಯಿಂದ ವಾಪಸ್

ಸೌದಿ ಅರೇಬಿಯಾಗೆ ಅಕ್ರಮವಾಗಿ ವಲಸೆ ಹೋಗಿದ್ದ ಸಾವಿರಾರು ಭಾರತೀಯರಿಗೆ ಅಲ್ಲಿನ ಸರ್ಕಾರ 90 ದಿನಗಳ ಕ್ಷಮಾದಾನ ಗಡುವು ನೀಡಿದ್ದು, 20,000 ಅಕ್ರಮ ವಲಸಿಗರು ಭಾರತಕ್ಕೆ ವಾಪಸ್ಸಾಗಲಿದ್ದಾರೆ.

20 ಸಾವಿರ ಅಕ್ರಮ ವಲಸಿಗ ಭಾರತೀಯರು ಸೌದಿಯಿಂದ ವಾಪಸ್
ಸೌದಿಯಿಂದ ವಾಪಸ್ಸಾಗಲಿರುವ 20,000 ಭಾರತೀಯ ಅಕ್ರಮ ವಲಸಿಗರು!
Published On :
ರಿಯಾದ್: ಸೌದಿ ಅರೇಬಿಯಾಗೆ ಅಕ್ರಮವಾಗಿ ವಲಸೆ ಹೋಗಿದ್ದ ಸಾವಿರಾರು ಭಾರತೀಯರಿಗೆ ಅಲ್ಲಿನ ಸರ್ಕಾರ 90 ದಿನಗಳ ಕ್ಷಮಾದಾನ ಗಡುವು ನೀಡಿದ್ದು, 20,000 ಅಕ್ರಮ ವಲಸಿಗರು ಭಾರತಕ್ಕೆ ವಾಪಸ್ಸಾಗಲಿದ್ದಾರೆ. 
ಈ ಬಗ್ಗೆ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿ ಅನಿಲ್ ನೌತಿಯಾಲ್ ಖಾಸಗಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದು, 20,321 ಭಾರತೀಯರು ದೇಶಕ್ಕೆ ವಾಪಾಸ್ಸಾಗಲು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಪೈಕಿ 1,500 ಬ್ಲೂ ಕಾಲರ್ ಕೆಲಸಗಾರರು ತಮಿಳುನಾಡಿನ ಮೂಲದವರಾಗಿದ್ದು, ಕ್ಷಮಾದಾನದ ಯೋಜನೆಯಡಿ ವಾಪಸ್ಸಾಗುತ್ತಿರುವವರ ಪೈಕಿ ಹೆಚ್ಚಿನವರು ಉತ್ತರ ಪ್ರದೇಶ ಹಾಗೂ ಬಿಹಾರ ಮೂಲದವರು ಎಂದು ಅನಿಲ್ ನೌತಿಯಾಲ್ ಹೇಳಿದ್ದಾರೆ. 
ಸೌದಿಯನ್ನು ತೊರೆಯುತ್ತಿರುವ ಭಾರತೀಯ ನಾಗರಿಕರಿಗಾಗಿಯೇ ಅಲ್ಲಿನ ಸರ್ಕಾರ ಪ್ರತ್ಯೇಕ ಕೇಂದ್ರಗಳನ್ನು ತೆರೆದಿದ್ದು, ಅಕ್ರಮವಾಗಿ ವಾಸಿಸುತ್ತಿರುವವರಿಗೆ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿರುವುದಾಗಿ ಅನಿಲ್ ನೌತಿಯಾಲ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.