ಚೀನಾ: ಎರಡು ಚಿನ್ನದ ಗಣಿಗಳಲ್ಲಿ ದುರಂತ; ಕನಿಷ್ಟ 10 ಸಾವು, ಹಲವರಿಗೆ ಗಾಯ
ಚೀನಾದ ಎರಡು ಪ್ರತ್ಯೇಕ ಚಿನ್ನದ ಗಣಿ ಅಪಘಾತಗಳಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.

ಬೀಜಿಂಗ್: ಚೀನಾದ ಎರಡು ಪ್ರತ್ಯೇಕ ಚಿನ್ನದ ಗಣಿ ಅಪಘಾತಗಳಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ 2 ಚಿನ್ನದ ಗಣಿಗಳಲ್ಲಿ ಕಳೆದ ರಾತ್ರಿ ಉಂಟಾದ 2 ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 10 ಮಂದಿ ಕಾರ್ಮಿಕರು ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಣಿಯೊಳಗೆ ಸಿಲುಕಿದ್ದಾರೆ. ಲಿಂಗಬೋ ನಗರದಲ್ಲಿರುವ ಚೈನಾ ನ್ಯಾಷನಲ್ ಗೋಲ್ಡ್ ಗ್ರೂಪ್ ನ ಕಿನ್ಲಿಂಗ್ ಗೋಲ್ಡ್ ಮೈನ್ ನಲ್ಲಿ ದಟ್ಟ ಹೊಗೆ ಅವರಿಸಿದ ಪರಿಣಾಮ 12 ಮಂದಿ ಕಾರ್ಮಿಕರು ಮತ್ತು 6 ನಿರ್ವಹಣಾ ಸಿಬ್ಬಂದಿಗಳು ಸಿಲುಕಿದ್ದು, ಈ ವರೆಗೂ ಈ ಗಣಿಯಲ್ಲಿ 7 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಅಂತೆಯೇ 10 ಮಂದಿ ಗಾಯಾಳು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಗಣಿ ಸಮೀಪದಲ್ಲೇ ಇರುವ ಮತ್ತೊಂದು ಗಣಿಯಲ್ಲೂ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾದ ಪರಿಣಾಮ 16ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಗಣಿಯೊಳಗೆ ಸಿಲುಕಿದ್ದರು. 6 ಮಂದಿಕಾರ್ಮಿಕರನ್ನು ಜೀವಂತ ಹೊರತೆಯಲಾಯಿತಾದರೂ ಮೂರು ಮಂದಿ ಕಾರ್ಮಿಕರು ಗಣಿಯೊಳಗೇ ಅಸುನೀಗಿದ್ದು, ಅವರ ಶವಗಳನ್ನು ಇದೀಗ ಹೊರತೆಗೆಯಲಾಗಿದೆ. ಗಣಿಯಲ್ಲಿ ಇನ್ನೂ ಹಲವು ಕಾರ್ಮಿಕರು ಸಿಲುಕಿರುವ ಶಂಕೆ ಇದ್ದು, ಕಾರ್ಯಾಚರಣೆ ಭರದಿಂದ ಸಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


