54 ವರ್ಷದ ನಂತರ ಭಾರತದಿಂದ ತಾಯ್ನಾಡಿಗೆ ಮರಳಿದ ಚೀನಾ ಯೋಧನಿಗೆ ತವರಲ್ಲಿ ಅದ್ಧೂರಿ ಸ್ವಾಗತ
: ಕಳೆದ 50 ವರ್ಷದಿಂದ ಭಾರತದಲ್ಲಿದ್ದ ಚೀನಾ ಯೋಧನಿಗೆ ತವರಿನಲ್ಲಿ ಅದ್ದೂರಿಯಾಗಿ ಸ್ವಾಗತ ನೀಡಲಾಯಿತು. 1962 ರಲ್ಲಿ ಗಡಿದಾಟಿ ಭಾರತ ಪ್ರವೇಶಿಸಿದ ...

ಬೀಜಿಂಗ್: ಕಳೆದ 50 ವರ್ಷದಿಂದ ಭಾರತದಲ್ಲಿದ್ದ ಚೀನಾ ಯೋಧನಿಗೆ ತವರಿನಲ್ಲಿ ಅದ್ದೂರಿಯಾಗಿ ಸ್ವಾಗತ ನೀಡಲಾಯಿತು. 1962 ರಲ್ಲಿ ಗಡಿದಾಟಿ ಭಾರತ ಪ್ರವೇಶಿಸಿದ ವಾಂಗ್ 50 ವರ್ಷದ ನಂತರ ತಾಯ್ನಾಡಿಗೆ ಮರಳಿದ್ದಾರೆ.
ವಾಂಗ್ ಜೊತೆ ಆತನ ಮಗ ವಿಷ್ಣು, ಮಗಳು ಹಾಗೂ ಮೊಮ್ಮಗಳು ಚೀನಾದ ಶಾಂಗ್ ಕೀ ಗ್ರಾಮದಲ್ಲಿ ಸ್ವಾಗತ ಕೋರಲಾಯಿತು ಎಂದು ಚೀನಾ ಮಾಧ್ಯಮ ವರದಿ ಮಾಡಿದೆ.
ಗ್ರಾಮಕ್ಕೆ ಬಂದ ವಾಂಗ್ ನನ್ನು ಆತನ ಸಂಬಂಧಿಕರು ಹಾಗೂ ಗ್ರಾಮಸ್ಧರು ಸುಪತ್ತುವರಿದು ಆರೋಗ್ಯ ಕ್ಷೇಮ ವಿಚಾರಿಸಿದರು. ನಂತರ ತನ್ನ ತಾಯಿಯ ಸಮಾಧಿ ಬಳಿ ತೆರಳಿದ ವಾಂಗ್ ನಮಸ್ಕರಿಸಿ ವಾಪಸಾದರು. ಗ್ರಾಮಸ್ಥರ ಸ್ವಾಗತಕ್ಕೆ ವಿಷ್ಣು ವಾಂಗ್ ಅಭಿನಂದಿಸಿದರು.
ವಾಂಗ್ ತಮ್ಮ ಸಂಸಾರದ ಜೊತೆ ವಾಸಿಸಲು ಬಯಸಿದರೇ ಸ್ಥಳೀಯ ಸರ್ಕಾರ ಅವರಿಗೆ ಮನೆ ನೀಡುವುದಾಗಿ ತಿಳಿಸಿದೆ ಎಂದು ವರದಿಯಾಗಿದೆ.1962 ರ ಸಿನೋ-ಭಾರತ ನಡುವೆ ನಡೆದ ಯುದ್ಧದ ವೇಳೆ ಭಾರತದ ಗಡಿ ಪ್ರವೇಶಿಸಿ ಬಂಧನಕ್ಕೊಳಗಾಗಿದ್ದ ಚೀನಿ ಸೈನಿಕ ವಾಂಗ್ ಕ್ಯು 54 ವರ್ಷಗಳ ಬಳಿಕ ತನ್ನ ತಾಯ್ನಾಡು ಚೀನಾಕ್ಕೆ ಹಿಂದಿರುಗಿದ್ದಾರೆ.
ಯುದ್ಧದ ಸಂದರ್ಭದಲ್ಲಿ ವಾಂಗ್ ಕ್ಯು ಅಚಾನಕ್ ಆಗಿ ಭಾರತದ ಗಡಿ ಪ್ರವೇಶಿಸಿದ್ದರು. ಈ ವೇಳೆ ಅವರನ್ನು ಭಾರತದಲ್ಲಿ ಬಂಧಿಸಿ ಜೈಲು ಶಿಕ್ಷೆಗೆ ಗುರಿಪಡಿಸಲಾಗಿತ್ತು. ಬಳಿಕ ಅವರನ್ನು 1969ರಲ್ಲಿ ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು. ನಂತರ ವಾಂಗ್ ಭಾರತೀಯ ಮಹಿಳೆಯನ್ನು ವಿವಾಹವಾಗಿ ಮಧ್ಯ ಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ನೆಲೆಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


