ವಿದೇಶ

ಅರುಣಾಚಲ ಪ್ರದೇಶಕ್ಕೆ ದಲೈ ಲಾಮ ಭೇಟಿ: ಭಾರತಕ್ಕೆ ಚೀನಾ ಮಾಧ್ಯಮಗಳ ಎಚ್ಚರಿಕೆ

ಚೀನಾದ ಆರ್ಥಿಕ ಹಾಗೂ ರಾಜಕೀಯ ಪ್ರಭಾವವನ್ನು ಕುಗ್ಗಿಸಲು ಭಾರತ ದಲೈ ಲಾಮ ಅವರನ್ನು ದಾಳವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದೆ.

ಅರುಣಾಚಲ ಪ್ರದೇಶಕ್ಕೆ ದಲೈ ಲಾಮ ಭೇಟಿ:  ಭಾರತಕ್ಕೆ ಚೀನಾ ಮಾಧ್ಯಮಗಳ ಎಚ್ಚರಿಕೆ
ದಲೈ ಲಾಮ
Published On :
ಬೀಜಿಂಗ್: ಅರುಣಾಚಲ ಪ್ರದೇಶದ ವಿಚಾರವಾಗಿ ಚೀನಾ ಮತ್ತೊಮ್ಮೆ ತಗಾದೆ ತೆಗೆದಿದ್ದು, ಚೀನಾದ ಆರ್ಥಿಕ ಹಾಗೂ ರಾಜಕೀಯ ಪ್ರಭಾವವನ್ನು ಕುಗ್ಗಿಸಲು ಭಾರತ ದಲೈ ಲಾಮ ಅವರನ್ನು ದಾಳವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದೆ. 
ಬೌದ್ಧ ಧರ್ಮಗುರು ದಲೈ ಲಾಮ ಅವರಿಗೆ ಅರುಣಾಚಲ ಪ್ರದೇಶದಲ್ಲಿ ಆತಿಥ್ಯ ನೀಡಿದರೆ ಭಾರತ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಚೀನಾ ಮಾಧ್ಯಮಗಳು ಭಾರತಕ್ಕೆ ಎಚ್ಚರಿಕೆ ನೀಡಿವೆ. ಚೀನಾ ವಿರೋಧದ ನಡುವೆಯೂ ಭಾರತ ಬೌದ್ಧ ಧರ್ಮಗುರು ದಲೈ ಲಾಮ ಅವರಿಗೆ ಕೆಲವೇ ವಾರಗಳಲ್ಲಿ ಆತಿಥ್ಯ ನೀಡಲಿದೆ ಎಂದು ಗ್ಲೋಬಲ್ ಟೈಮ್ಸ್ ಸಂಪಾದಕೀಯ ಪುಟದಲ್ಲಿ ಲೇಖನ ಪ್ರಕಟಿಸಿದೆ. 
ಚೀನಾದ ವಿದೇಶಾಂಗ ಇಲಾಖೆ ದಲೈ ಲಾಮ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವುದನ್ನು ಪ್ರಶ್ನಿಸಿದ ಬೆನ್ನಲ್ಲೇ ಚೀನಾ ಮಾಧ್ಯಮಗಳು ಭಾರತಕ್ಕೆ ಎಚ್ಚರಿಕೆ ನೀಡಿದೆ. 2016 ರ ಅಕ್ಟೋಬರ್ ನಲ್ಲಿ ದಲೈ ಲಾಮ ಅವರಿಗೆ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲು ಅನುಮತಿ ದೊರೆತಿದ್ದು, ಕೆಲವೇ ವಾರಗಳಲ್ಲಿ ದಲೈ ಲಾಮ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.