ರಷ್ಯಾ ನಿರ್ಮಿತ ಅತ್ಯಾಧುನಿಕ ವಾಯು ದಾಳಿ ಸಂರಕ್ಷಕ ವ್ಯವಸ್ಥೆ ಯಶಸ್ವೀ ಪ್ರಯೋಗ ನಡೆಸಿದ ಇರಾನ್!
ರಷ್ಯಾ ನಿರ್ಮಿತ ಅತ್ಯಾಧುನಿಕ ವಾಯು ದಾಳಿ ಸಂರಕ್ಷಕ ವ್ಯವಸ್ಥೆ ಎಸ್-300ಯನ್ನು ಇರಾನ್ ಸೇನೆ ಯಶಸ್ವಿಯಾಗಿ ಪ್ರಯೋಗಿಸಿದೆ.

ತೆಹ್ರಾನ್: ರಷ್ಯಾ ನಿರ್ಮಿತ ಅತ್ಯಾಧುನಿಕ ವಾಯು ದಾಳಿ ಸಂರಕ್ಷಕ ವ್ಯವಸ್ಥೆ ಎಸ್-300ಯನ್ನು ಇರಾನ್ ಸೇನೆ ಯಶಸ್ವಿಯಾಗಿ ಪ್ರಯೋಗಿಸಿದೆ.
ರಷ್ಯಾ ನಿರ್ಮಾಣ ಮಾಡಿರುವ ಅತ್ಯಾಧುನಿಕ ವಾಯು ದಾಳಿ ನಿರೋಧಕ ವ್ಯವಸ್ಥೆ ಎಸ್-300 ಅನ್ನು ಇರಾನ್ ಯಶಸ್ವಿಯಾಗಿ ಪ್ರಯೋಗಿಸಿದ್ದು, ಇರಾನ್ ನ ಅತ್ಯಂತ ಎತ್ತರದ ಗುಡ್ಡಗಾಡು ಪ್ರದೇಶದಲ್ಲಿ ಇದನ್ನು ಪ್ರಯೋಗಿಸಲಾಗಿದೆ ಎಂದು ಇರಾನ್ ಸೇನೆಯ ಮೂಲಗಳು ತಿಳಿಸಿವೆ. ಇರಾನ್ ಸೇನೆ ಇತ್ತೀಚೆಗೆ ನಡೆಸಿದ ಯುದ್ಧ ತರಬೇತಿ ಡ್ಯಾಮ್ವಾಂಡ್ ವೇಳೆ ಈ ಎಸ್-300 ವಾಯುದಾಳಿ ನಿರೋಧಕ ವ್ಯವಸ್ಥೆಯನ್ನು ಪ್ರಯೋಗ ಮಾಡಿದ್ದು, ಪ್ರಯೋಗದಲ್ಲಿ ಎಸ್-300 ಯಶಸ್ವಿಯಾಗಿದೆ ಎಂದು ಸೇನೆ ಹೇಳಿಕೊಂಡಿದೆ.
ಪರೀಕ್ಷೆ ವೇಳೆ ಎಸ್ -300 ವಿವಿಧ ಸ್ತರದಲ್ಲಿನ ಗುರಿಗಳನ್ನು ಯಶಸ್ವಿಯಾಗಿ ಮುಟ್ಟಿದ್ದು, 200 ಕಿ.ಮೀ ವ್ಯಾಪ್ತಿಯಲ್ಲಿನ ವಿಮಾನ, ಕ್ಷಿಪಣಿ ಮತ್ತು ಯುದ್ಧನೌಕೆಗಳನ್ನು ಕ್ಷಣ ಮಾತ್ರದಲ್ಲಿ ಧ್ವಂಸಗೊಳಿಸಿದೆ. ವಾಯು ದಾಳಿ ನಿರೋಧಕ ಕ್ಷಿಪಣಿ ವ್ಯವಸ್ಥೆಗೆ ಮುಂದಾಗಿದ್ದ ಇರಾನ್ 10 ವರ್ಷಗಳ ಹಿಂದೆಯೇ ರಷ್ಯಾ ದೊಂದಿಗೆ 800 ಮಿಲಿಯನ್ ಮೌಲ್ಯದ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ 2016ರಲ್ಲಿ ರಷ್ಯಾ ತನ್ನ ಎಸ್-300 ವಾಯುದಾಳಿ ನಿರೋಧಕ ವ್ಯವಸ್ಥೆಯನ್ನು ಇರಾನ್ ಗೆ ಹಸ್ತಾಂತರಿಸಿತ್ತು.
ಈ ಹಿಂದೆ ಅಣ್ವಸ್ತ್ರ ಪರೀಕ್ಷೆ ಮಾಡಿ ವಿಶ್ವಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ ಇರಾನ್ ಮೇಲಿನ ನಿರ್ಬಂಧಗಳನ್ನು 2016ರಲ್ಲಿ ತೆರವುಗೊಳಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


