ವಿದೇಶ

ಸಿಕ್ಕಿಂ ಗಡಿ ವಿವಾದ ಕುರಿತು ಭಾರತದೊಂದಿಗೆ ಮಾತುಕತೆಗೆ ಚೀನಾ ಕೋರಿಕೆ

ಸಿಕ್ಕಿಂ ಸೆಕ್ಟರ್ ನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ಅರ್ಥಪೂರ್ಣ ಮಾತುಕತೆ ನಡೆಸಬೇಕು ಎಂದು ಗುರುವಾರ....

ಸಿಕ್ಕಿಂ ಗಡಿ ವಿವಾದ ಕುರಿತು ಭಾರತದೊಂದಿಗೆ ಮಾತುಕತೆಗೆ ಚೀನಾ ಕೋರಿಕೆ
ಲು ಕಾಂಗ್
Published On :
ಬೀಜಿಂಗ್: ಸಿಕ್ಕಿಂ ಸೆಕ್ಟರ್ ನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ಅರ್ಥಪೂರ್ಣ ಮಾತುಕತೆ ನಡೆಸಬೇಕು ಎಂದು ಗುರುವಾರ ಚೀನಾ ಹೇಳಿದೆ. ಅಲ್ಲದೆ ಡೊಂಕ್ಲಮ್ ನಲ್ಲಿ ನಿಯೋಜಿಸಿರುವ ಸೇನೆಯನ್ನು ಭಾರತ ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.
ಸಿಕ್ಕಿಂ ಗಡಿ ವಿವಾದವನ್ನು ಭಾರತ ಮತ್ತು ಚೀನಾ ರಾಜತಾಂತ್ರಿಕ ಮಾತುಕತೆ ಮೂಲಕ ಪರಿಹರಿಸೊಳ್ಳಬೇಕು. ಆ ಪ್ರದೇಶದಲ್ಲಿ ವಿವಾದ ರಹಿತ ಸಾರ್ವಭೌಮತ್ವವನ್ನು ಚೀನಾ ಬಯಸುತ್ತದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಅವರು ಹೇಳಿದ್ದಾರೆ.
ಸಿಕ್ಕಿಂ ಸೆಕ್ಟರ್ ನ ಡೊಂಕ್ಲಮ್ ಪ್ರದೇಶದಿಂದ ಭಾರತೀಯ ಸೇನೆ ಹಿಂದೆ ಸರಿದರೆ ಗಡಿ ಸಮಸ್ಯೆಯನ್ನು ಅರ್ಥಪೂರ್ಣ ಮಾತುಕತೆಯಿಂದ ಬಗೆಹರಿಸಿಕೊಳ್ಳಬಹುದು ಎಂದು ಕಾಂಗ್ ತಿಳಿಸಿದ್ದಾರೆ.
ಡೊಂಕ್ಲಮ್ ಪ್ರದೇಶದಲ್ಲಿ ಭಾರತೀಯ ಸೇನೆ ಅಕ್ರಮವಾಗಿ ಒಳನುಸುಳಿರುವ ಫೋಟೋಗಳು ತಮ್ಮ ಬಳಿ ಇವೆ ಎಂದು ಲು ಕಾಂಗ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.