ವಿದೇಶ

ಯಾವುದೇ ರಾಷ್ಟ್ರ ಭಯೋತ್ಪಾದನೆಯನ್ನು ಏಕಾಂಗಿಯಾಗಿ ಸೋಲಿಸಲು ಸಾಧ್ಯವಿಲ್ಲ: ಭಾರತ

ಯಾವುದೇ ದೇಶ ಏಕಾಂಗಿಯಾಗಿ ಭಯೋತ್ಪಾದನೆ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ತಮ್ಮ ವ್ಯಾಪ್ತಿ...

ಯಾವುದೇ ರಾಷ್ಟ್ರ ಭಯೋತ್ಪಾದನೆಯನ್ನು ಏಕಾಂಗಿಯಾಗಿ ಸೋಲಿಸಲು ಸಾಧ್ಯವಿಲ್ಲ: ಭಾರತ
ಸಾಂದರ್ಭಿಕ ಚಿತ್ರ
Published On :
ವಿಶ್ವಸಂಸ್ಥೆ: ಯಾವುದೇ ದೇಶ ಏಕಾಂಗಿಯಾಗಿ ಭಯೋತ್ಪಾದನೆ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ತಮ್ಮ  ವ್ಯಾಪ್ತಿ ಮೀರಿ ದೇಶಗಳು, ಭಯೋತ್ಪಾದಕ ಸಂಘಟನೆಗಳ ದಾಳಿಗಳಿಗೆ ಒಳಗಾಗುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೆ ಬೇರೆ ದೇಶಗಳು ಪರಸ್ಪರ ಸಹಕಾರ ನೀಡಬೇಕು ಎಂದು ಭಾರತ ಕೋರಿದೆ. 
ವಿಶ್ವದಾದ್ಯಂತ ಉಗ್ರರ ದಾಳಿ, ಹಿಂಸೆಗಳು ಮುಂದುವರಿಯುತ್ತಿರುವಾಗ ಯಾವುದೇ ದೇಶ ಭಯೋತ್ಪಾದಕ ಬೆದರಿಕೆಯಿಂದ ಮುಕ್ತಿ ಹೊಂದಿಲ್ಲ.  ಅದು ಶ್ರೀಮಂತ ಅಥವಾ ಶಕ್ತಿಶಾಲಿ ದೇಶವೇ ಆಗಿರಲಿ ಭಯೋತ್ಪಾದನೆಯನ್ನು ಒಂಟಿಯಾಗಿ ಎದುರಿಸಿ ನಾಶಪಡಿಸಲು ಸಾಧ್ಯವಿಲ್ಲ ಎಂದು ಭಾರತದ ವಿಶ್ವಸಂಸ್ಥೆಯ ಉಪ ಖಾಯಂ ಪ್ರತಿನಿಧಿ ರಾಯಭಾರಿ ತನ್ಮಯ ಲಾಲ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಭಯೋತ್ಪಾದಕ ನಿಗ್ರಹ ಸಲಹಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಿಜವಾದ ಮತ್ತು ಪರಿಣಾಮಕಾರಿಯಾದ  ಭಯೋತ್ಪಾದನೆಯ ಸವಾಲನ್ನು ಎದುರಿಸಲು ಬಹು ಹಂತಗಳಲ್ಲಿ ಅಂತರರಾಷ್ಟ್ರೀಯ ಸಹಕಾರವು ಮಹತ್ವದ್ದಾಗಿದೆ ಎಂದು ಹೇಳಿದರು.
ಹಲವು ದೇಶಗಳಲ್ಲಿ ಮತ್ತು ಪ್ರದೇಶಗಳಲ್ಲಿ ಭಯೋತ್ಪಾದನೆಯ ಹಿಂಸೆ ಮುಂದುವರಿದಿದೆ. ಭಯೋತ್ಪಾದಕ ಸಂಘಟನೆಗಳು ಮತ್ತು ಅವರ ಜಾಲ ವ್ಯಾಪ್ತಿ ಅಂತಾರಾಷ್ಟ್ರೀಯ ಗಡಿಗಳು, ನೀತಿ ನಿಯಮ ಹಾಗೂ ಕಾನೂನು ಚೌಕಟ್ಟುಗಳಿಗೆ ಸೀಮಿತವಾಗಿಲ್ಲ. ಬಹು ಹಂತಗಳ ಕ್ರಮ, ಸಮನ್ವಯತೆ ಮತ್ತು ಸಹಕಾರ, ಭಯೋತ್ಪಾದನೆ ನಿಗ್ರಹಕ್ಕೆ ಹೆಚ್ಚು ತುರ್ತಾಗಿ ಬೇಕಾಗಿದೆ ಎಂದು ಹೇಳಿದರು.
ವಿಶ್ವಸಂಸ್ಥೆಯ ಭಯೋತ್ಪಾದಕ ನಿಗ್ರಹ ಕೇಂದ್ರ ಸ್ಥಾಪನೆಯನ್ನು ಭಾರತ ಕಳೆದ ವಾರ ಸ್ವಾಗತಿಸಿತ್ತು. ಅದು ಭಯೋತ್ಪಾದನೆ ನಿಗ್ರಹಕ್ಕೆ ವಿಶ್ವಸಂಸ್ಥೆಗೆ ಸಹಕಾರ ನೀಡಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.