ವಿದೇಶ

ಮೆಕ್ಕಾದ ಮಹಾ ಮಸೀದಿ ಸ್ಫೋಟಗೊಳಿಸುವ ಉಗ್ರರ ಯತ್ನ ವಿಫಲಗೊಳಿಸಿದ ಭದ್ರತಾ ಪಡೆ

ಮುಸ್ಲಿಂರ ಪವಿತ್ರ ನಗರ ಮೆಕ್ಕಾದಲ್ಲಿನ ಮಹಾ ಮಸೀದಿಯನ್ನು ಸ್ಫೋಟಗೊಳಿಸುವ ಉಗ್ರರ ಯತ್ನವನ್ನು ಸೌದಿ ಅರೇಬಿಯಾ ಪೊಲೀಸರು...

ಮೆಕ್ಕಾದ ಮಹಾ ಮಸೀದಿ ಸ್ಫೋಟಗೊಳಿಸುವ ಉಗ್ರರ ಯತ್ನ ವಿಫಲಗೊಳಿಸಿದ ಭದ್ರತಾ ಪಡೆ
ಮೆಕ್ಕಾ ಮಹಾ ಮಸೀದಿ
Published On :
ರಿಯಾದ್: ಮುಸ್ಲಿಂರ ಪವಿತ್ರ ನಗರ ಮೆಕ್ಕಾದಲ್ಲಿನ ಮಹಾ ಮಸೀದಿಯನ್ನು ಸ್ಫೋಟಗೊಳಿಸುವ ಉಗ್ರರ ಯತ್ನವನ್ನು ಸೌದಿ ಅರೇಬಿಯಾ ಪೊಲೀಸರು ವಿಫಲಗೊಳಿಸಿದ್ದಾರೆ. 
ರಂಜಾನ್ ಮುಸ್ಲಿಂರ ಪಾಲಿಗೆ ಅತ್ಯಂತ ಪವಿತ್ರವಾದ ಮಾಸವಾಗಿದ್ದು ಈ ಹಿನ್ನೆಲೆಯಲ್ಲಿ ಮೆಕ್ಕಾದ ಮಹಾ ಮಸೀದಿಯಲ್ಲಿ ಲಕ್ಷಾಂತರ ಜನರು ಸೇರುತ್ತಿದ್ದು ಈ ಹಿನ್ನೆಲೆಯಲ್ಲಿ ಉಗ್ರರು ಆತ್ಮಾಹುತಿ ಬಾಂಬ್ ದಾಳಿಯ ಮೂಲಕ ಮಹಾ ಮಸೀದಿಯನ್ನು ಸ್ಫೋಟಗೊಳಿಸುವ ಯತ್ನ ಮಾಡಿದ್ದು ಇದನ್ನು ಸೌದಿ ಪೊಲೀಸರು ವಿಫಲಗೊಳಿಸಿದ್ದು ದೊಡ್ಡ ಅನಾಹುತವೊಂದನ್ನು ತಡೆದಿದ್ದಾರೆ. 
ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಯಲು ಬಂದಿದ್ದ ಓರ್ವ ಮಹಿಳೆ ಸೇರಿದಂತೆ ಐವರನ್ನು ಸೌದಿ ಪೊಲೀಸರು ಬಂಧಿಸಿದ್ದಾರೆ ಎಂದು ಸೌದಿ ಆಂತರಿಕ ಸಚಿವಾಲಯದ ವಕ್ತಾರ ಮನ್ಸೂರ್ ಅಲ್ ತುರ್ಕಿ ಹೇಳಿರುವುದಾಗಿ ಅಲ್ ಅರಾಬಿಯಾ ವೆಬ್ ಸೈಟ್ ವರದಿ ಮಾಡಿದೆ. 
ಮೂರು ಭಯೋತ್ಪಾದಕರ ಗುಂಪುಗಳು ಆತ್ಮಾಹುತಿ ಬಾಂಬ್ ದಾಳಿಗೆ ಯತ್ನಿಸಿದ್ದು ಅದರಲ್ಲಿ ಎರಡು ಗುಂಪು ಮೆಕ್ಕಾದಲ್ಲಿ ಮತ್ತೊಂದು ಗುಂಪು ಜಿದ್ದಾದಲ್ಲಿ ದಾಳಿಗೆ ಮುಂದಾಗಿದ್ದವು ಎಂದು ಮನ್ಸೂರ್ ಅಲ್ ತುರ್ಕಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.