ಅಪ್ಪಂದಿರ ದಿನಕ್ಕೆ ಗೂಗಲ್ ನಿಂದ ವಿಶೇಷ ಡೂಡಲ್!
ವಿಶ್ವ ಅಪ್ಪಂದಿರ ದಿನದ ನಿಮಿತ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಬಿಡಿಸುವ ಮೂಲಕ ಗೌರವ ಸೂಚಿಸಿದೆ.

ನವದೆಹಲಿ: ವಿಶ್ವ ಅಪ್ಪಂದಿರ ದಿನದ ನಿಮಿತ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಬಿಡಿಸುವ ಮೂಲಕ ಗೌರವ ಸೂಚಿಸಿದೆ.
ಜೂನ್ 18ರಂದು ವಿಶ್ವಾದ್ಯಂತ ಅಪ್ಪಂದಿರ ದಿನವಾಗಿ ಆಚರಣೆ ಮಾಡಲಾಗುತ್ತಿದ್ದು, ಗೂಗಲ್ ಕೂಡ ವಿಶ್ವ ಅಪ್ಪಂದಿರ ದಿನವನ್ನು ವಿಶೇಷವಾಗಿ ನೆನಪಿಸುವ ಪ್ರಯತ್ನ ಮಾಡಿದೆ.
ಕ್ಯಾಕ್ಟಸ್ ಗಿಡ ತನ್ನ ಮಗುವನ್ನು ಆರೈಕೆ ಮಾಡುವ ಚಿತ್ರಗಳನ್ನು ಡೂಡಲ್ ನಲ್ಲಿ ಬಿಡಿಸಿ ಅಪ್ಪಂದಿರ ಮಹತ್ವವನ್ನು ಗೂಗಲ್ ಸಾರಲು ಪ್ರಯತ್ನಿಸಿದೆ. ಮಗು ಕ್ಯಾಕ್ಟಸ್ ಗೆ ತಂದೆ ಕ್ಯಾಕ್ಟಸ್ ನೀರುಣಿಸುವ, ಮನರಂಜನೆ ನೀಡುವ ಪ್ರೀತಿ ತೋರುವ ವಿಶೇಷ ಚಿತ್ರಗಳನ್ನು ಡೂಡಲ್ ನಲ್ಲಿ ಬಿಡಿಸಲಾಗಿದೆ.
ತಾಯಂದಿರ ದಿನದಂತೆಯೇ ಅಪ್ಪಂದಿರ ದಿನವನ್ನೂ ಕೂಡ ವಿಶ್ವಾದ್ಯಂತ ಆಚರಿಸಲಾಗುತ್ತದೆ. ಜೂನ್ ತಿಂಗಳ ಮೂರನೇ ಭಾನುವಾರವನ್ನು ವಿಶ್ವ ಅಪ್ಪಂದಿರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


