ವಿದೇಶ

ಪ್ಯಾರಿಸ್ ಒಪ್ಪಂದದ ಹೊರತಾಗಿಯೂ ಹವಾಮಾನ ರಕ್ಷಣೆಗೆ ಭಾರತ ಬದ್ಧ: ಮೋದಿ

ಹವಾಮಾನ ರಕ್ಷಣೆಯ ವಿಷಯವಾಗಿ ಭಾರತದ ನಿಲುವನ್ನು ಸ್ಪಷ್ಟಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ಯಾರಿಸ್ ಒಪ್ಪಂದದ ಹೊರತಾಗಿಯೂ ಭಾರತ ಹವಾಮಾನ ರಕ್ಷಣೆಗೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ಯಾರಿಸ್ ಒಪ್ಪಂದದ ಹೊರತಾಗಿಯೂ ಹವಾಮಾನ ರಕ್ಷಣೆಗೆ ಭಾರತ ಬದ್ಧ: ಮೋದಿ
ನರೇಂದ್ರ ಮೋದಿ
Published On :
ಸೇಂಟ್ ಪೀಟರ್ಸ್ ಬರ್ಗ್: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಪ್ರವಾಸವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ್ದಾರೆ. ಈ ನಡುವೆ ಹವಾಮಾನ ಬದಲಾವಣೆ ವಿರುದ್ಧದ ಹೋರಾಟದ ವಿಷಯದಲ್ಲಿ ಪ್ರಮುಖ ಬೆಳವಣಿಗೆ ನಡೆದಿದ್ದು ಪ್ಯಾರಿಸ್ ಒಪ್ಪಂದದಿಂದ ಹೊರಗುಳಿಯುವುದಾಗಿ ಅಮೆರಿಕ ತಿಳಿಸಿದೆ. 
ಹವಾಮಾನ ರಕ್ಷಣೆಯ ವಿಷಯವಾಗಿ ಭಾರತದ ನಿಲುವನ್ನು ಸ್ಪಷ್ಟಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ಯಾರಿಸ್ ಒಪ್ಪಂದದ ಹೊರತಾಗಿಯೂ ಭಾರತ ಹವಾಮಾನ ರಕ್ಷಣೆಗೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ರಷ್ಯಾ ಏರ್ಪಡಿಸಿದ್ದ ಆರ್ಥಿಕ ವೇದಿಕೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ 
ಹವಾಮಾನ ರಕ್ಷಣೆಯ ವಿಷಯದ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ವೇದಗಳನ್ನು ಉಲ್ಲೇಖಿಸಿದ್ದು, ಪರಿಸರಕ್ಕೆ ಹಾನಿ ಮಾಡುವುದು ಅಪರಾಧವೆಸಗಿದಂತೆ, ಇದನ್ನು ಭಾರತದ ವೇದಗಳು 5000 ವರ್ಷಗಳ ಹಿಂದೆಯೇ ಹೇಳಿವೆ. ಪರಿಸರದಿಂದ ಉಪಯೋಗ ಪಡೆಯುವುದಕ್ಕೆ ಮನುಷ್ಯನಿಗೆ ಅವಕಾಶವಿದೆ. ಆದರೆ ಅದನ್ನು ನಾಶ ಮಾಡುವುದಕ್ಕೆ ಅವನಿಗೆ ಅಧಿಕಾರವಿಲ್ಲ ಇದನ್ನೇ ಭಾರತದ ವೇದಗಳು ಹೇಳಿವೆ ಎಂದು ಮೋದಿ ಹೇಳಿದ್ದಾರೆ. ಜರ್ಮನಿಯಲ್ಲೂ ಇದೇ ಮಾದರಿ ಉತ್ತರ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್ ಒಪ್ಪಂದದ ಹೊರತಾಗಿಯೂ ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ಭಾರತ ಬದ್ಧವಾಗಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.