ರಷ್ಯಾದಲ್ಲಿರುವ 755 ಅಮೆರಿಕ ರಾಯಭಾರಿಗಳನ್ನು ಹೊರಗಟ್ಟಿದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ಮಹತ್ವದ ಬೆಳವಣಿಗೆಯಲ್ಲಿ ರಷ್ಯಾದಲ್ಲಿರುವ ಸುಮಾರು 755 ಅಮೆರಿಕ ರಾಯಭಾರಿಗಳನ್ನು ಆ ದೇಶದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡಲೇ ದೇಶ ತೊರೆಯುಂತೆ ಆದೇಶ ನೀಡಿದ್ದಾರೆ.

ಮಾಸ್ಕೊ: ಮಹತ್ವದ ಬೆಳವಣಿಗೆಯಲ್ಲಿ ರಷ್ಯಾದಲ್ಲಿರುವ ಸುಮಾರು 755 ಅಮೆರಿಕ ರಾಯಭಾರಿಗಳನ್ನು ಆ ದೇಶದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡಲೇ ದೇಶ ತೊರೆಯುಂತೆ ಆದೇಶ ನೀಡಿದ್ದಾರೆ.
ರಷ್ಯಾ ವಿರುದ್ಧದ ನಿರ್ಬಂಧಗಳನ್ನು ಕಠಿಣಗೊಳಿಸುವ ವಿಧೇಯಕಕ್ಕೆ ಅಮೆರಿಕ ಸೆನೆಟ್ ಅನುಮೋದನೆ ನೀಡಿರುವ ಹಿನ್ನಲೆಯಲ್ಲಿ ಅಮೆರಿಕ ವಿರುದ್ಧ ಕೆಂಡಾಮಂಡಲವಾಗಿರುವ ವ್ಲಾಡಿಮಿರ್ ಪುಟಿನ್, ತಮ್ಮ ದೇಶದಲ್ಲಿರುವ 755 ಅಮೆರಿಕ ರಾಜತಾಂತ್ರಿಕರನ್ನು ದೇಶದಿಂದ ಹೊರ ಹಾಕುವ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ನಿನ್ನೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅಮೆರಿಕ ರಾಯಭಾರಿಗಳು ತತ್ ಕ್ಷಣವೇ ರಷ್ಯಾದಿಂದ ನಿರ್ಗಮಿಸಬೇಕೆಂದು ಪುಟಿನ್ ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಷ್ಯಾ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿದ ಆರೋಪ ಹಾಗೂ 2014ರಲ್ಲಿ ಕ್ರೀಮಿಯಾದ ಮೇಲೆ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಆ ದೇಶದ ವಿರುದ್ಧ ಕಠಿಣ ನಿರ್ಬಂಧಗಳನ್ನು ಹೇರುವ ವಿಧೇಯಕವನ್ನು ಅಮೆರಿಕ ಸೆನೆಟ್ ಗುರುವಾರ ಬಹುಮತದೊಂದಿಗೆ ಅಂಗೀಕರಿಸಿತ್ತು.
ರಾಜತಾಂತ್ರಿಕರ ಸಂಖ್ಯೆ ಕಡಿತಗೊಳಿಸುವಂತೆ ಕೋರಿದ್ದ ರಷ್ಯಾ
ಈ ಹಿಂದೆ ತನ್ನ ದೇಶದಲ್ಲಿರುವ ರಾಜತಾಂತ್ರಿಕರ ಸಂಖ್ಯೆಯನ್ನು ಕಡಿತಗೊಳಿಸುವಂತೆ ಅಮೆರಿಕಕ್ಕೆ ರಷ್ಯಾ ಆಗ್ರಹಿಸಿತ್ತು. ಅಮೆರಿಕದಲ್ಲಿರುವ ರಷ್ಯನ್ ರಾಜತಾಂತ್ರಿಕ ಸಂಖ್ಯೆಗೆ ಸಮಾನವಾಗಿ ಅಂದರೆ 455ಕ್ಕೆ ಕಡಿತಗೊಳಿಸಬೇಕೆಂದು ರಷ್ಯಾದ ವಿದೇಶಾಂಗ ಇಲಾಖೆಯು ಈ ಹಿಂದೆ ಆಗ್ರಹಿಸಿತ್ತು.
ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪ್ರಸ್ತುತ ಸಾವಿರಕ್ಕೂ ಅಧಿಕ ಅಮೆರಿಕನ್ ರಾಜತಾಂತ್ರಿಕರು ಅಮೆರಿಕದ ರಾಯಭಾರಿ ಕಚೇರಿ ಹಾಗೂ ದೂತಾವಾಸ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಖ್ಯೆ ಕಡಿತವಾಗಬೇಕು. ಅಂತೆಯೇ ಅಮೆರಿಕದ ಜೊತೆಗಿನ ನಮ್ಮ ದೇಶದ ಬಾಂಧವ್ಯವು ಉತ್ತಮಗೊಳ್ಳುವುದೆಂದು ನಾವು ಬಹಳ ಸಮಯದಿಂದ ಕಾಯುತ್ತಿದ್ದೆವು. ಅದರೆ ಸದ್ಯಕ್ಕೆ ಅಂತಹ ಸನ್ನಿವೇಶ ಕಂಡು ಬರುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


