ತಿಗಣೆ ಕೊಲ್ಲಲು ಮಹಿಳೆ ಬಳಸಿದ ಲೈಟರ್ ನಿಂದ ಇಡೀ ಆಪಾರ್ಟ್ ಮೆಂಟ್ ಗೆ ಬೆಂಕಿ!
ಮನೆಯಲ್ಲಿದ್ದ ತಿಗಣೆಯನ್ನು ಲೈಟರ್ ನಿಂದ ಕೊಲ್ಲಲು ಮಹಿಳೆ ಇಟ್ಟ ಬೆಂಕಿ ಬಳಿಕ ಇಡೀ ಆಪಾರ್ಟ್ ಮೆಂಟ್ ವ್ಯಾಪಿಸಿ ಅಲ್ಲಿದ್ದ ನಿವಾಸಿಗಳು ದಿಕ್ಕಾಪಾಲಾಗಿ ಓಡಿದ ಘಟನೆ ಅಮೆರಿಕದ ಹ್ಯೂಸ್ಟನ್ ನಲ್ಲಿ ನಡೆದಿದೆ.

ಹ್ಯೂಸ್ಟನ್: ಮನೆಯಲ್ಲಿದ್ದ ತಿಗಣೆಯನ್ನು ಲೈಟರ್ ನಿಂದ ಕೊಲ್ಲಲು ಮಹಿಳೆ ಇಟ್ಟ ಬೆಂಕಿ ಬಳಿಕ ಇಡೀ ಆಪಾರ್ಟ್ ಮೆಂಟ್ ವ್ಯಾಪಿಸಿ ಅಲ್ಲಿದ್ದ ನಿವಾಸಿಗಳು ದಿಕ್ಕಾಪಾಲಾಗಿ ಓಡಿದ ಘಟನೆ ಅಮೆರಿಕದ ಹ್ಯೂಸ್ಟನ್ ನಲ್ಲಿ ನಡೆದಿದೆ.
ಹ್ಯೂಸ್ಟನ್ ಕ್ಯಾನ್ಸಾಸ್ ನಲ್ಲಿರುವ ಟೊಪೆಕಾ ಪ್ರದೇಶದ ಆಪಾರ್ಟ್ ಮೆಂಟ್ ನ ನಿವಾಸಿ ಕಾರ್ಲೆಸ್ ಈ ಯಡವಟ್ಟು ಮಾಡಿದ್ದು, ಕಾರ್ಲೆಸ್ ಳ ಯಡವಟ್ಟಿನಿಂದಾಗಿ ಆಪಾರ್ಟ್ ಮೆಂಟ್ ಬಹುತೇಕ ಭಾಗ ಬೆಂಕಿಗಾಹುತಿಯಾಗಿದೆ. ಮೂಲಗಳ ಪ್ರಕಾರ ಮಹಿಳೆ ಕಾರ್ಲೆಸ್ ಮತ್ತು ಆಕೆಯ ಪುತ್ರಿ ತಮ್ಮ ಬೆಡ್ ರೂಮಿನಲ್ಲಿದ್ದ ಬೆಡ್ ನಲ್ಲಿ ಅವಿತಿದ್ದ ತಿಗಣೆಗಳನ್ನು ಹುಡುಕಿ ಕೊಲ್ಲುತ್ತಿದ್ದರಂತೆ. ಈ ವೇಳೆ ಬೆಡ್ ನ ಅಡಿಯಲ್ಲಿರುವ ತಿಗಣೆಗಳನ್ನು ಹುಡುಕುತ್ತಿದ್ದಾಗ ಮಧ್ಯಮ ಗಾತ್ರದ ದೊಡ್ಡ ತಿಗಣೆಯೊಂದು ಸಿಕ್ಕಿದೆ.
ಇದನ್ನು ಲೈಟರ್ ನಿಂದ ಸುಟ್ಟು ಕೊಲ್ಲುವಂತೆ ಕಾರ್ಲೆಸ್ ತನ್ನ ಮಗಳಿಗೆ ಸೂಚಿಸಿದ್ದಾಳೆ. ಅದರಂತೆ ಮಗಳು ಲೈಟರ್ ಅನ್ನು ಹಚ್ಚಿದಾಗ ಅದರ ಕಿಡಿ ಬೆಡ್ ಗೆ ತಗುಲಿದ್ದು, ಕ್ರಮೇಣ ಬೆಂಕಿ ಉತ್ಪತ್ತಿಯಾಗಿದೆ. ಬೆಂಕಿ ನೋಡ ನೋಡುತ್ತಿದ್ದಂತೆಯೇ ಇಡೀ ಆಪಾರ್ಟ್ ಮೆಂಟ್ ಗೆ ಹಬ್ಬಿದ್ದು, ಕಾರ್ಲೆಸ್ ಳ ನಿವಾಸ ಮಾತ್ರವಲ್ಲದೇ ಅಕ್ಕಪಕ್ಕದ ನಿವಾಸಗಳಿಗೂ ಹಬ್ಬಿದೆ. ಕೂಡಲೇ ಸ್ಥಳೀಯ ಅಗ್ನಿಶಾಮಕ ದಳಕ್ಕೆ ವಿಚಾರ ಮುಟ್ಟಿಸಿದ್ದು, ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಆರಂಭದಲ್ಲಿ ಬೆಂಕಿಗೆ ಕಾರಣ ಏನು ಎಂಬುದು ಯಾರಿಗೂ ತಿಳಿದುಬಂದಿಲ್ಲವಾದರೂ ಬಳಿಕ ಅಧಿಕಾರಿಗಳ ತನಿಖೆ ವೇಳೆ ಮಹಿಳೆ ಮಾಡಿದ್ದ ಯಡವಟ್ಟು ಬೆಳಕಿಗೆ ಬಂದಿದೆ. ಮಹಿಳೆಯ ಯಡವಟ್ಟಿನಿಂದಾಗಿ ಇದೀಗ ಸುಮಾರು 1,40,000 ಡಾಲರ್ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


