ಚೀನಾ ಅಧ್ಯಕ್ಷರನ್ನು ಭೇಟಿ ಮಾಡಿದ ಎನ್ಎಸ್ಎ ಅಜಿತ್ ದೋವಲ್
ಬ್ರಿಕ್ಸ್ ರಾಷ್ಟ್ರಗಳ ರಾಷ್ಟ್ರಿಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಭಾಗವಹಿಸಲು ಚೀನಾಗೆ ಭೇಟಿ ನೀಡಿರುವ ಎನ್ಎಸ್ಎ ಅಜಿತ್ ದೋವಲ್ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡಿದ್ದಾರೆ.

Published On :
ಬೀಜಿಂಗ್: ಬ್ರಿಕ್ಸ್ ರಾಷ್ಟ್ರಗಳ ರಾಷ್ಟ್ರಿಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಭಾಗವಹಿಸಲು ಚೀನಾಗೆ ಭೇಟಿ ನೀಡಿರುವ ಎನ್ಎಸ್ಎ ಅಜಿತ್ ದೋವಲ್ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡಿದ್ದಾರೆ.
ಡೋಕ್ಲಾಮ್ ಗಡಿ ವಿವಾದ ಎದುರಾಗಿರುವ ಸಂದರ್ಭದಲ್ಲೇ ಚೀನಾ ಅಧ್ಯಕ್ಷರನ್ನು ಎನ್ಎಸ್ಎ ಅಜಿತ್ ದೋವಲ್ ಭೇಟಿ ಮಾಡಿರುವುದು ಮಹತ್ವ ಪಡೆದುಕೊಂಡಿದೆ. ಎನ್ಎಸ್ಎ ಅಜಿತ್ ದೋವಲ್ ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ ಬ್ರಿಕ್ಸ್ ರಾಷ್ಟ್ರಗಳ ಎನ್ಎಸ್ಎ ಗಳ ಸಭೆ ಬಗ್ಗೆ ಮಾತನಾಡಿರುವ ಕ್ಸಿ ಜಿನ್ ಪಿಂಗ್, ಭದ್ರತಾ ಸಹಕಾರವನ್ನು ವೃದ್ಧಿಸುವುದಕ್ಕೆ ಸದಸ್ಯ ರಾಷ್ಟ್ರಗಳ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ ಎನ್ಎಸ್ಎ ಸಭೆಯ ಪಾರ್ಶ್ವದಲ್ಲಿ ಅಜಿತ್ ದೋವಲ್ ಚೀನಾದ ಉನ್ನತ ಮಟ್ಟದ ರಾಜತಾಂತ್ರಿಕ ಅಧಿಕಾರಿಯನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


