ಭಾರತದೊಂದಿಗಿನ ಯುದ್ಧಕ್ಕೆ ಚೀನಾ ಹೆದರುವುದಿಲ್ಲ: ಚೀನಾ ಮಾಧ್ಯಮ
ಭಾರತ-ಚೀನಾ ನಡುವಿನ ಗಡಿ ವಿವಾದ ಮುಂದುವರೆದಿದ್ದು, ಚೀನಾ ಯುದ್ಧದ ಬಗ್ಗೆ ಮಾತನಾಡಿದೆ.

Published On :
ಬೀಜಿಂಗ್: ಭಾರತ-ಚೀನಾ ನಡುವಿನ ಗಡಿ ವಿವಾದ ಮುಂದುವರೆದಿದ್ದು, ಚೀನಾ ಯುದ್ಧದ ಬಗ್ಗೆ ಮಾತನಾಡಿದೆ.
ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್ ಲೇಖನವೊಂದನ್ನು ಪ್ರಕಟಿಸಿದ್ದು, ಚೀನಾ ಸಹ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯ ಸೇನಾ ಪಡೆಯನ್ನು ನಿಯೋಜಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದೆ. ಚೀನಾದ ಕ್ಷಿಪ್ರ ಆರ್ಥಿಕ ಬೆಳವಣಿಗೆಯಿಂದ ಆತಂಕಕ್ಕೊಳಗಾದ ಭಾರತ ಗಡಿಯಲ್ಲಿ ವಿವಾದವನ್ನು ಹುಟ್ಟುಹಾಕಿದೆ ಎಂದು ಚೀನಾ ಮಾಧ್ಯಮ ಪ್ರಕಟಿಸಿರುವ ಲೇಖನದಲ್ಲಿ ಆರೋಪಿಸಲಾಗಿದೆ.
ಚೀನಾ ತನ್ನ ಸಾರ್ವಭೌಮತೆಯನ್ನು ರಕ್ಷಿಸಿಕೊಳ್ಳಲು ಭಾರತದೊಂದಿಗೆ ಯುದ್ಧ ಮಾಡುವುದಕ್ಕೂ ಚೀನಾ ಹೆದರುವುದಿಲ್ಲ, ಚೀನಾ ಗಡಿಯಲ್ಲಿರುವ ಸೇನಾ ಪಡೆಯನ್ನು ವಾಪಸ್ ಕರೆಸಿಕೊಳ್ಳುವಂತೆ ಭಾರತಕ್ಕೆ ಸಲಹೆ ನೀಡುತ್ತಿದ್ದರೆ, ಭಾರತದ ಜನಾಭಿಪ್ರಾಯ ಯುದ್ಧದ ಬಗ್ಗೆ ಇದೆ. ಚೀನಾ ಭಾರತದೊಂದಿಗೆ ಯುದ್ಧ ಮಾಡುವುದಕ್ಕೂ ಹೆದರುವುದಿಲ್ಲ ಎಂದು ಚೀನಾ ಮಾಧ್ಯಮದಲ್ಲಿ ಪ್ರಕಟಗೊಂಡ ಲೇಖನ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


