ವಿದೇಶ

ಕುಲಭೂಷಣ್ ಜಾದವ್ ತಾಯಿಗೆ ವೀಸಾ ನೀಡುವ ಕುರಿತು ಶೀಘ್ರ ನಿರ್ಧಾರ: ಪಾಕಿಸ್ತಾನ

ಅಕ್ರಮ ಬೇಹುಗಾರಿಕೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದಿಂದ ಬಂಧನಕ್ಕೊಳಗಾಗಿರುವ ಭಾರತೀಯ ಕುಲಭೂಷಣ್ ಜಾದವ್ ಭೇಟಿಗೆ ಅವರ ತಾಯಿಗೆ ವೀಸಾ ನೀಡುವ ಕುರಿತು ಪಾಕಿಸ್ತಾನ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಲಿದೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ತಿಳಿಸಿದೆ.

ಕುಲಭೂಷಣ್ ಜಾದವ್ ತಾಯಿಗೆ ವೀಸಾ ನೀಡುವ ಕುರಿತು ಶೀಘ್ರ ನಿರ್ಧಾರ: ಪಾಕಿಸ್ತಾನ
ಸಂಗ್ರಹ ಚಿತ್ರ
Published On :

ಇಸ್ಲಾಮಾಬಾದ್: ಅಕ್ರಮ ಬೇಹುಗಾರಿಕೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದಿಂದ ಬಂಧನಕ್ಕೊಳಗಾಗಿರುವ ಭಾರತೀಯ ಕುಲಭೂಷಣ್ ಜಾದವ್ ಭೇಟಿಗೆ ಅವರ ತಾಯಿಗೆ ವೀಸಾ ನೀಡುವ ಕುರಿತು ಪಾಕಿಸ್ತಾನ  ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಲಿದೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ತಿಳಿಸಿದೆ.

ಕುಲಭೂಷಣ್ ಜಾದವ್ ಅವರ ತಾಯಿ ಆವಂತಿಕಾ ಅವರಿಗೆ ವೀಸಾ ನೀಡುವ ಕುರಿತು ಪಾಕಿಸ್ತಾನ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ವಕ್ತಾರ ನಫೀಜ್ ಝಕಾರಿಯಾ ಹೇಳಿದ್ದಾರೆ. ಈ  ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳ ಕುರಿತು ಪ್ರತಿಕ್ರಿಯಿಸಿದ ಅವರು, ವಿದೇಶಾಂಗ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ, ಶೀಘ್ರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.  ಅಂತೆಯೇ  ಭಾರತ ಪಾಕಿಸ್ತಾನದ ಪ್ರಜೆಗಳ ವೈದ್ಯಕೀಯ ವೀಸಾ ನೀಡಿಕೆಯಲ್ಲಿ ಕಠಿಣ ನಿಯಮಗಳನ್ನು ಅಳವಡಿಸಿದೆ. ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾದ್ ಎಜೀಜ್ ಅವರ ಶಿಫಾರಸ್ಸಿನ ಮೇರೆಗೆ  ವೀಸಾ ನೀಡುವುದಾಗಿ ನಿಯಮಾವಳಿ ಅಳವಡಿಸಿದೆ. ಆ ಮೂಲಕ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ಹೇರಲು ಭಾರತ ಮುಂದಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಗಡಿಯಲ್ಲಿನ ಇಂಡೋ-ಪಾಕ್ ಗುಂಡಿನ ದಾಳಿಗಳ ಕುರಿತು ಮಾತನಾಡಿದ ಅವರು, ಭಾರತ ಈ ವರೆಗೂ 542 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಉದ್ದೇಶಪೂರ್ವಕವಾಗಿಯೇ ಭಾರತ ಗಡಿಯಲ್ಲಿ ಒತ್ತಡ ಹೆಚ್ಚಿಸುತ್ತಿದ್ದು,  18 ಮಂದಿ ಪಾಕಿಸ್ತಾನದ ನಾಗರಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನಕ್ಕೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡುವ ಯಾವುದೇ ಉದ್ದೇಶವಿಲ್ಲ. ಆದರೆ ಎದುರಾಳಿಗಳು ಗುಂಡಿನ ದಾಳಿ ನಡೆಸಿದಾಗ ಖಂಡಿತಾ ಅದಕ್ಕೆ ದಿಟ್ಟ  ಉತ್ತರ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಕಾಶ್ಮೀರ ವಿಚಾರವಾಗಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಕಾಶ್ಮೀರ ವಿವಾದ ಇದೀಗ ಅಂತಾರಾಷ್ಟ್ರೀಯ ಗಮನ ಸೆಳೆದಿದೆ.  ಅಂತಾರಾಷ್ಟ್ರೀಯ ಸಮುದಾಯ ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ಸಮಯ ಬಂದಿದ್ದು, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಒಟ್ಟಾರೆ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ವಕ್ತಾರ ನಫೀಜ್ ಝಕಾರಿಯಾ ಹೇಳಿಕೆ ಅನ್ವಯ ಜೈಲಿನಲ್ಲಿರುವ ತಮ್ಮ ಮಗ ಕುಲಭೂಷಣ್ ಜಾದವ್ ಭೇಟಿಗೆ ಅವರ ತಾಯಿ ಆವಂತಿಕಾ ಅವರಿಗೆ ಅವಕಾಶ ನೀಡುವುದಿಲ್ಲ  ಎಂಬುದನ್ನು ಪಾಕಿಸ್ತಾನ ಪರೋಕ್ಷವಾಗಿ ಹೇಳುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.