ವಿದೇಶ

ಜಿಎಸ್ಟಿ ಜಾರಿ: ಪ್ರಧಾನಿ ಮೋದಿಯನ್ನು ಹೊಗಳಿದ ಚೀನಾ ಸರ್ಕಾರಿ ಮಾಧ್ಯಮ

ಸಿಕ್ಕಿಂ ಗಡಿ ವಿವಾದದ ವಿಷಯವಾಗಿ ಭಾರತವನ್ನು ದೂಷಿಸುತ್ತಾ ನಿರಂತರವಾಗಿ ಲೇಖನಗಳನ್ನು ಪ್ರಕಟಿಸುತ್ತಿದ್ದ ಚೀನಾ ಸರ್ಕಾರಿ ಒಡೆತನದ ಗ್ಲೋಬಲ್ ಟೈಮ್ಸ್ ಪತ್ರಿಕೆ...

ಜಿಎಸ್ಟಿ ಜಾರಿ: ಪ್ರಧಾನಿ ಮೋದಿಯನ್ನು ಹೊಗಳಿದ ಚೀನಾ ಸರ್ಕಾರಿ ಮಾಧ್ಯಮ
ನರೇಂದ್ರ ಮೋದಿ
Published On :
ಬೀಜಿಂಗ್: ಸಿಕ್ಕಿಂ ಗಡಿ ವಿವಾದದ ವಿಷಯವಾಗಿ ಭಾರತವನ್ನು ದೂಷಿಸುತ್ತಾ ನಿರಂತರವಾಗಿ ಲೇಖನಗಳನ್ನು ಪ್ರಕಟಿಸುತ್ತಿದ್ದ ಚೀನಾ ಸರ್ಕಾರಿ ಒಡೆತನದ ಗ್ಲೋಬಲ್ ಟೈಮ್ಸ್ ಪತ್ರಿಕೆ ಇದೀಗ ನರೇಂದ್ರ ಮೋದಿ ಆಡಳಿತವನ್ನು ಮೆಚ್ಚಿ ವರದಿ ಪ್ರಕಟಿಸಿದೆ. 
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸರಕು ಸೇವಾ ತೆರಿಗೆ(ಜಿಎಸ್ಟಿ)ಯನ್ನು ಜಾರಿಗೆ ತಂದಿರುವುದು ಐತಿಹಾಸಿಕ ನಡೆ ಎಂದು ಬರ್ಣಿಸಿದ್ದು ಈ ಹಿರಿಮೆ ಪ್ರಧಾನಿ ಮೋದಿ ಅವರಿಗೆ ಸಲ್ಲಬೇಕು ಎಂದು ಅಭಿಪ್ರಾಯಪಟ್ಟಿದೆ. 
ಚೀನಾದಿಂದ ಅತಿ ಕಡಿಮೆ ವೆಚ್ಚದ ತಯಾರಿಕಾ ಘಟಕಗಳು ನಿಧಾನವಾಗಿ ಹೊರ ಹೋಗುತ್ತಿದ್ದು ಮುಂದಿನ ದಿನಗಳಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ಚೀನಾ ಸ್ಥಾನವನ್ನು ಭಾರತ ತುಂಬುವ ಸಾಧ್ಯತೆಗಳಿವೆ ಎಂದು ಗ್ಲೋಬಲ್ ಟೈಮ್ಸ್ ಲೇಖನವನ್ನು ಪ್ರಕಟಿಸಿದೆ. 
ಹೊಸ ತೆರಿಗೆ ನೀತಿ ಜಿಎಸ್ಟಿ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳಿಗೆ ಮತ್ತಷ್ಟು ಹುರುಪು ನೀಡುತ್ತದೆ. ಮೂಲ ಸೌಕರ್ಯಗಳ ಕೊರತೆ ಮತ್ತು ನೀತಿಗಳನ್ನು ಜಾರಿ ಮಾಡುವಲ್ಲಿ ರಾಜ್ಯಗಳ ನಡುವೆ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಸದ್ಯದ ಮಟ್ಟಿಗೆ ಈ ಸಮಸ್ಯೆಯು ಅಲ್ಪಮಟ್ಟದ್ದಾಗಿದ್ದು ಭಾರತ ಸರ್ಕಾರ ಇದನ್ನು ದಾಟಿ ಮುಂದೆ ಸಾಗುತ್ತಿದೆ ಎಂದು ಲೇಖನ ಪ್ರಕಟಿಸಿದೆ. 
ಚೀನಾ ಭಾರತದ ಗಡಿ ಸಿಕ್ಕಿಂ ಪ್ರದೇಶದ ವಿಷಯವಾಗಿ ಚೀನಾ ಪತ್ರಿಕೆ ಪ್ರತಿದಿನ ಭಾರತ ವಿರೋಧಿ ಲೇಖನಗಳನ್ನು ಪ್ರಕಟಿಸುತ್ತಿತ್ತು. ಈ ಮಧ್ಯೆ ಪ್ರಧಾನಿ ಮೋದಿ ಅವರನ್ನು ಹೊಗಳಿ ಬರೆದಿರುವುದು ಆಶ್ಚರ್ಯದ ಸಂಗತಿಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.