ಭಾರತ-ಚೀನಾ ಈ ಹಿಂದೆಯೂ ಅನೇಕ ಗಡಿ ವಿವಾದಗಳನ್ನು ನಿಭಾಯಿಸಿವೆ: ವಿದೇಶಾಂಗ ಅಧಿಕಾರಿ ಜೈಶಂಕರ್
ಭಾರತ-ಚೀನಾಗಳು ಈ ಹಿಂದೆಯೂ ಅನೇಕ ಗಡಿ ವಿವಾದಗಳನ್ನು ನಿರ್ವಹಿಸಿವೆ, ಈ ಬಾರಿ ಅಂತಹ ವಿವಾದ ನಿರ್ವಹಣೆ ಸಾಧ್ಯವಾಗದೇ ಇರುವುದಕ್ಕೆ ಕಾರಣವಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್

Published On :
ಸಿಂಗಪೂರ್: ಭಾರತ-ಚೀನಾಗಳು ಈ ಹಿಂದೆಯೂ ಅನೇಕ ಗಡಿ ವಿವಾದಗಳನ್ನು ನಿರ್ವಹಿಸಿವೆ, ಈ ಬಾರಿ ಅಂತಹ ವಿವಾದ ನಿರ್ವಹಣೆ ಸಾಧ್ಯವಾಗದೇ ಇರುವುದಕ್ಕೆ ಕಾರಣವಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಹೇಳಿದ್ದಾರೆ.
ಭಾರತ-ಆಸಿಯಾನ್ ಆಂಡ್ ದಿ ಚೇಂಜಿಂಗ್ ಜಿಯೋ ಪೊಲಿಟಿಕ್ಸ್ ಎಂಬ ವಿಷಯದ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜೈಶಂಕರ್ ಗೆ ಸಿಕ್ಕಿಂ ಗಡಿ ಪ್ರದೇಶದಲ್ಲಿ ಉಂಟಾಗಿರುವ ಗಡಿ ವಿವಾದದ ಬಗ್ಗೆ ಪ್ರಶ್ನೆ ಕೇಳಲಾಯಿತು. ಈ ವೇಳೆ ಉತ್ತರಿಸಿರುವ ಅವರು, ಉಭಯ ದೇಶಗಳ ನಡುವೆ ಉದ್ದದ ಗಡಿ ಇದೆ, ಕಾಲ ಕಾಲಕ್ಕೆ ಭಿನ್ನಾಭಿಪ್ರಾಯಗಳೂ ಇರುತ್ತವೆ, ಭಾರತ-ಚೀನಾ ಈ ಹಿಂದೆಯೂ ಅನೇಕ ಗಡಿ ವಿವಾದಗಳನ್ನು ನಿರ್ವಹಿಸಿವೆ. ಈಗ ಅದು ಸಾಧ್ಯವಿಲ್ಲ ಎನ್ನುವುದಕ್ಕೆ ಕಾರಣಗಳಿಲ್ಲ ಎಂದು ಹೇಳಿದ್ದಾರೆ.
ಸಿಕ್ಕಿಂ ನ ಡೋಕ್ಲಾಮ್ ಪ್ರದೇಶದಲ್ಲಿ ಚೀನಾ-ಭಾರತ ನಡುವೆ ಗಡಿ ವಿವಾದ ಉಂಟಾಗಿದ್ದು, ಭಾರತ ತನ್ನ ಸೇನಾ ಪಡೆಯನ್ನು ನಿಯೋಜಿಸಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಗಡಿ ವಿವಾದಭಾರತ-ಚೀನಾForeign Secretary S Jaishankarವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್India-China- Border dispute
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


