ಕಲ್ಲು ತೂರಾಟಗಾರರಿಗೆ ಇಸ್ರೇಲ್ ಸೈನಿಕರ ಉತ್ತರ ಹೇಗಿರುತ್ತೆ ಗೊತ್ತಾ.. ಈ ವಿಡಿಯೋ ನೋಡಿ!
ನಮ್ಮ ಕಾಶ್ಮೀರದಲ್ಲಿ ಇರುವಂತೆಯೇ ಇಸ್ರೇಲ್ ನಲ್ಲೂ ಕೂಡ ಭಯೋತ್ಪಾದಕರೊಂದಿಗೆ ಸ್ಥಳೀಯ ಕಲ್ಲು ತೂರಾಟಗಾರರ ಸಮಸ್ಯೆ ಸೈನಿಕರನ್ನು ಪೀಡಿಸುತ್ತಿದ್ದು, ಇಂತಹ ಕಲ್ಲು ತೂರಾಟಗಾರರ ಸಮಸ್ಯೆಗೆ ಇಸ್ರೇಲ್ ಸೈನಿಕರು ಕಂಡುಕೊಂಡ ಮಾರ್ಗ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ನವದೆಹಲಿ: ನಮ್ಮ ಕಾಶ್ಮೀರದಲ್ಲಿ ಇರುವಂತೆಯೇ ಇಸ್ರೇಲ್ ನಲ್ಲೂ ಕೂಡ ಭಯೋತ್ಪಾದಕರೊಂದಿಗೆ ಸ್ಥಳೀಯ ಕಲ್ಲು ತೂರಾಟಗಾರರ ಸಮಸ್ಯೆ ಸೈನಿಕರನ್ನು ಪೀಡಿಸುತ್ತಿದ್ದು, ಇಂತಹ ಕಲ್ಲು ತೂರಾಟಗಾರರ ಸಮಸ್ಯೆಗೆ ಇಸ್ರೇಲ್ ಸೈನಿಕರು ಕಂಡುಕೊಂಡ ಮಾರ್ಗ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.
ಇಸ್ರೇಲ್ ದೇಶದಲ್ಲಿ ಕೂಡ ಭಯೋತ್ಪಾದಕರ ಉಪಟ್ಟಳ ಹೆಚ್ಚಾಗಿದ್ದು ಅವರಿಗೆ ಸಹಾಯ ಮಾಡುವ ಸ್ಥಳೀಯ ನಿವಾಸಿಗಳು ಹಾಗೂ ಕಲ್ಲು ತೂರಾಟಗಾರರು ಸಹ ಇದ್ದಾರೆ. ಅಂಥಹ ಕಲ್ಲು ತೂರುವವರನ್ನು ಸದೆಬಡಿಯಲು ಇಸ್ರೇಲ್ ಸೈನಿಕರು ಕೈಗೊಂಡ ಕ್ರಮ ಮಾತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸೈನಿಕರತ್ತ ಕಲ್ಲು ತೂರುವ ಕಲ್ಲು ತೂರಾಟಗಾರರ ನಡುವೆ ಇಸ್ರೇಲ್ ಸೈನಿಕರು ತಾವೇ ಕಲ್ಲು ತೂರುವವರಂತೆ ವೇಷ ತೂಟ್ಟು ಅವರ ಜೂತೆ ಸೇರಿಕೂಂಡು ಅವರ ನಾಯಕನನ್ನು ಹಿಡಿಯುತ್ತಾರೆ. ಕಲ್ಲು ತೂರಾಟಗಾರರ ನಾಯಕ ಸೈನಿಕರಿಂದ ಬಂಧನಕ್ಕೊಳಪಡುತ್ತಿದ್ದಂತೆಯೇ ಅಲ್ಲಿನ ಕಲ್ಲು ತೂರಾಟಗಾರರ ಗುಂಪು ಅಲ್ಲಿಂದ ಬೆದರಿ ಪರಾರಿಯಾಗುತ್ತದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೇ ರೀತಿಯ ಚಾಕಚಕ್ಯತೆ ನಮ್ಮ ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ವಿರುದ್ಧ ಅನುಸರಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


