ವಿದೇಶ

ಇಸ್ರೇಲ್ ನಲ್ಲಿ ಮೋದಿ: ಯಾದ್ ವಶೆಮ್ ಸ್ಮಾರಕಕ್ಕೆ ಭೇಟಿ

ಇಸ್ರೇಲ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರೊಂದಿಗೆ ಅಲ್ಲಿನ ಯಾದ್ ವಶೆಮ್ ಸ್ಮಾರಕ ಮ್ಯೂಸಿಯಂ ಗೆ ಭೇಟಿ ನೀಡಿದ್ದಾರೆ.

ಇಸ್ರೇಲ್ ನಲ್ಲಿ ಮೋದಿ: ಯಾದ್ ವಶೆಮ್ ಸ್ಮಾರಕಕ್ಕೆ ಭೇಟಿ
ನರೇಂದ್ರ ಮೋದಿ
Published On :
ಜೆರುಸಲೇಂ: ಇಸ್ರೇಲ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರೊಂದಿಗೆ ಅಲ್ಲಿನ ಯಾದ್ ವಶೆಮ್ ಸ್ಮಾರಕ ಮ್ಯೂಸಿಯಂ ಗೆ ಭೇಟಿ ನೀಡಿದ್ದಾರೆ. 
ಮಾನವ ಇತಿಹಾಸದಲ್ಲೇ ಅತ್ಯಂತ ದೊಡ್ಡ ದುರಂತಗಳಲ್ಲಿ ಒಂದೆಂದು ಪರಿಗಣಿಸಲಾಗುವ ನಾಜಿ ದಬ್ಬಾಳಿಕೆ ಕಾಲದಲ್ಲಿ ನಡೆದಿರುವ ಹತ್ಯಾಕಾಂಡದಲ್ಲಿ ಮಡಿದವರಿಗೆ ಗೌರವ ಸೂಚಕವಾಗಿ ಯಾದ್ ವಶೆಮ್ ಸ್ಮಾರಕ ಮ್ಯೂಸಿಯಂ ನ್ನು ನಿರ್ಮಿಸಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸೂಚಿಸಿದ್ದಾರೆ. ಇದಾದ ಬಳಿಕ 1918ರಲ್ಲಿ ಹೈಫಾ ವಿಮೋಚನೆಯ ವೇಳೆ ಬಲಿದಾನಗೈದ ಪರಾಕ್ರಮಿ ಭಾರತೀಯ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಯಾದ್ ವಶೆಮ್ ಸ್ಮಾರಕ ಮ್ಯೂಸಿಯಂ ಗೆ ಭೇಟಿ ನೀಡಿದ ಚಿತ್ರವನ್ನು ವಿದೇಶಾಂಗ ಇಲಾಖೆ ವಕ್ತಾರ ಗೋಪಾಲ್ ಬಾಗ್ಲೆ ಟ್ವೀಟ್ ಮಾಡಿದ್ದಾರೆ. ಯಹೂದಿಗಳ ಹತ್ಯಾಕಾಂಡವನ್ನು ದಾಖಲಿಸುವುದಕ್ಕಾಗಿ ಜೆರುಸಲೇಂ ಬಳಿ 1953 ಯಾದ್ ವಶೆಮ್ ಮೌಂಟ್ ಆಫ್ ರಿಮೆಂಬರೆನ್ಸ್ ಎಂಬ ಸಂಸ್ಥೆ, ಮ್ಯೂಸಿಯಂ ನ್ನು ಪ್ರಾರಂಭಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.