ನಮ್ಮದು ಶಾಂತಿಯುತ ಭೂಮಿ, ಉಗ್ರರನ್ನು ಕಳುಹಿಸಬೇಡಿ; ಪಾಕ್ ಪ್ರಧಾನಿ, ಸೇನೆಗೆ ಪಿಒಕೆ ನಾಯಕರು
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಶಾಂತಿಯುತ ಭೂಮಿಯಾಗಿದ್ದು, ಪಾಕಿಸ್ತಾನ ನಮ್ಮ ಭೂಮಿಯಲ್ಲಿ ಉಗ್ರರ ಕ್ಯಾಂಪ್ ಗಳನ್ನು ನಿರ್ಮಾಣ ಮಾಡುವ ಮೂಲಕ ನಮ್ಮ ಭೂಮಿಯನ್ನು ಉಗ್ರರ ಕಾರ್ಖಾನೆಯಾಗಿ ಬದಲಾಯಿಸುತ್ತಿದೆ ಎಂದು ಪಿಒಕೆ ನಾಯಕರು ಪಾಕಿಸ್ತಾನದ ವಿರುದ್ಧ ತೀವ್ರವಾಗಿ...

Published On :
ಹಜಿರಾ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಶಾಂತಿಯುತ ಭೂಮಿಯಾಗಿದ್ದು, ಪಾಕಿಸ್ತಾನ ನಮ್ಮ ಭೂಮಿಯಲ್ಲಿ ಉಗ್ರರ ಕ್ಯಾಂಪ್ ಗಳನ್ನು ನಿರ್ಮಾಣ ಮಾಡುವ ಮೂಲಕ ನಮ್ಮ ಭೂಮಿಯನ್ನು ಉಗ್ರರ ಕಾರ್ಖಾನೆಯಾಗಿ ಬದಲಾಯಿಸುತ್ತಿದೆ ಎಂದು ಪಿಒಕೆ ನಾಯಕರು ಪಾಕಿಸ್ತಾನದ ವಿರುದ್ಧ ತೀವ್ರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹಜಿರಾ ನಿವಾಸಿಗಳು ಪಾಕಿಸ್ತಾನದಿಂದ ಸ್ವಾತಂತ್ರ್ಯ ಕೊಡಿಸುವಂತೆ ಆಗ್ರಹಿಸಿ ತೀವ್ರವಾಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಪಾಕಿಸ್ತಾನದ ನಾಯಕರು ಹಾಗೂ ಅಲ್ಲಿನ ಸೈನಿಕರು ನಮ್ಮ ಭೂಮಿಗೆ ಉಗ್ರರನ್ನು ರವಾನಿಸುತ್ತಿದ್ದು, ಉಗ್ರರಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೆಲೆಯನ್ನು ಸುರಕ್ಷಿತ ತಾಣವಾಗಿ ನಿರ್ಮಾಣ ಮಾಡುತ್ತಿದೆ ಎಂದು ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಿಒಕೆಯಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಉಗ್ರರ ಕ್ಯಾಂಪ್ ಗಳು ನಿರ್ಮಾಣವಾಗಿದ್ದು, ಸ್ಥಳದಲ್ಲಿ ಉಗ್ರರ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಲಷ್ಕರ್-ಇ-ತೊಯ್ಬಾ, ಲಷ್ಕರ್-ಇ-ಝಾಂಗ್ವಿ ಮತ್ತು ಇಸಿಸ್ ಉಗ್ರರ ಸಂಘಟನೆಗಳ ಕ್ಯಾಂಪ್ ಗಳು ಪಿಒಕೆಯಲ್ಲಿವೆ ಎಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಪ್ರತಿಭಟನೆprotestNawaz SharifPakistanಪಾಕಿಸ್ತಾನPakistan Armyಪಾಕಿಸ್ತಾನ ಸೇನೆನವಾಜ್ ಷರೀಫ್PoKಪಿಒಕೆPOK leaderಪಿಒಕೆ ನಾಯಕರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


