ವಿದೇಶ

ಇಂಡೋ- ಅಮೆರಿಕಾ ಒಪ್ಪಂದಗಳನ್ನು ಬಲಪಡಿಸಿದ್ದಕ್ಕೆ ಮೋದಿಗೆ ಧನ್ಯವಾದ ಹೇಳಿದ ಬರಾಕ್ ಒಬಾಮಾ

ಭಾರತ ಮತ್ತು ಅಮೆರಿಕಾ ನಡುವಿನ ದ್ವಿಪಕ್ಷೀಯ ಒಪ್ಪಂದಗಳನ್ನು ಬಲಪಡಿಸಲು ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿರ್ಗಮಿತ ಅಧ್ಯಕ್ಷ ಬರಾಕ್ ...

ಇಂಡೋ- ಅಮೆರಿಕಾ ಒಪ್ಪಂದಗಳನ್ನು ಬಲಪಡಿಸಿದ್ದಕ್ಕೆ ಮೋದಿಗೆ ಧನ್ಯವಾದ ಹೇಳಿದ ಬರಾಕ್ ಒಬಾಮಾ
ಬರಾಕ್ ಒಬಾಮಾ
Published On :

ವಾಷಿಂಗ್ಟನ್: ಭಾರತ ಮತ್ತು ಅಮೆರಿಕಾ ನಡುವಿನ ದ್ವಿಪಕ್ಷೀಯ ಒಪ್ಪಂದಗಳನ್ನು ಬಲಪಡಿಸಲು ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮಾ ಧನ್ಯವಾದ ಸಲ್ಲಿಸಿದ್ದಾರೆಂದು ವೈಟ್ ಹೌಸ್ ಮೂಲಗಳು ತಿಳಿಸಿವೆ.

ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಮಾತನಾಡಿದ ಒಬಾಮಾ ರಕ್ಷಣೆ. ನಾಗರಿಕ ಪರಮಾಣು ಶಕ್ತಿ ಸೇರಿದಂತೆ ಹಲವು ವಿಷಯಗಳ ಮೇಲಿನ ಒಪ್ಪಂದಗಳಲ್ಲಿ ಭಾರತದ ಸಹಭಾಗಿತ್ವಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಹಲವು ವಿಷಯಗಳ ಬಗ್ಗೆ ಇಬ್ಬರು ನಾಯಕರು ಮಾತನಾಡಿದ್ದಾರೆ ಎಂದು ಹೇಳಲಾಗಿದೆ,

2015 ರ ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದನ್ನು ಸ್ಮರಿಸಿದ ಒಬಾಮಾ ಮುಂಬರುವ 68ನೇ ಗಣರಾಜ್ಯೋತ್ಸವಕ್ಕಾಗಿ  ಮೋದಿಗೆ ಶುಭಾಶಯ ತಿಳಿಸಿರುವುದಾಗಿ ವೈಟ್ ಹೌಸ್ ಮೂಲಗಳು ತಿಳಿಸಿವೆ.

ಭಾರತ, ಅಮೆರಿಕಾದ  ಬಹುದೊಡ್ಡ ರಕ್ಷಣಾ ಪಾಲುದಾರನಾಗಿದ್ದು, ಹಾಗೂ ಜಾಗತಿಕ ಸವಾಲಾಗಿರುವ ಹವಾಮಾನ ಬದಲಾವಣೆ ಸೇರಿದಂತೆ ಹಲವು  ವಿಷಯಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಆರ್ಥಿಕ ಹಾಗೂ ಭಧ್ರತಾ ವಿಷಯಗಳ ಆದ್ಯತೆ ಹಾಗೂ ಪ್ರಗತಿ ಸಂಬಂಧ ಇಬ್ಬರು ನಾಯಕರು ಸಮಾಲೋಚಿಸಿದ್ದಾರೆ.

2014ರ ಮೇ ನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸಿದ ನರೇಂದ್ರ ಮೋದಿ ಅವರಿಗೆ ಮೊಟ್ಟ ಮೊದಲು ಒಬಾಮಾ ಅವರು ಶುಭಾಶಯ ತಿಳಿಸಿದ್ದರು. ಜೊತೆಗೆ ವೈಟ್ ಹೌಸ್ ಗೆ ಬರುವಂತೆ ಕೂಡಲೇ ಆಹ್ವಾನ ನೀಡಿದ್ದರು. 2014ರ ಸೆಪ್ಟಂಬರ್ ನಲ್ಲಿ ಇಬ್ಬರು ನಾಯಕರು ವೈಟ್ ಹೌಸ್ ನಲ್ಲಿ ಭೇಟಿ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಇಬ್ಬರು ನಾಯಕರು ಸುಮಾರು 8 ಬಾರಿ ಭೇಟಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.