ವಿದೇಶ

ಇಟಲಿಯಲ್ಲಿ ಒಂದು ಗಂಟೆಯಲ್ಲಿ ಮೂರು ಬಾರಿ ಕಂಪಿಸಿದ ಭೂಮಿ

ಮಧ್ಯ ಇಟಲಿಯಲ್ಲಿ ಬುಧವಾರ ದೊಡ್ಡ ಪ್ರಮಾಣದ ಸರಣಿ ಭೂಕಂಪವಾಗಿದ್ದು, ಕಳೆದ ವರ್ಷ ಸರಣಿ ಭೂಕಂಪ ಸಂಭವಿಸಿದ ಪ್ರದೇಶದಲ್ಲೇ...

ಇಟಲಿಯಲ್ಲಿ ಒಂದು ಗಂಟೆಯಲ್ಲಿ ಮೂರು ಬಾರಿ ಕಂಪಿಸಿದ ಭೂಮಿ
ಸರಣ ಭೂಕಂಪದ ನಂತರ ರಸ್ತೆಗೆ ಬಂದಿರುವ ಜನ
Published On :
ರೋಮ್: ಮಧ್ಯ ಇಟಲಿಯಲ್ಲಿ ಬುಧವಾರ ದೊಡ್ಡ ಪ್ರಮಾಣದ ಸರಣಿ ಭೂಕಂಪವಾಗಿದ್ದು, ಕಳೆದ ವರ್ಷ ಸರಣಿ ಭೂಕಂಪ ಸಂಭವಿಸಿದ ಪ್ರದೇಶದಲ್ಲೇ ಈ ಬಾರಿಯೂ ಮೂರು ಬಾರಿ ಭೂಮಿ ಕಂಪಿಸಿದೆ.
ಇಂದು ಬೆಳಗ್ಗೆ 10.25ಕ್ಕೆ ಮೊದಲ ಬಾರಿಗೆ 5.4 ತೀವ್ರತೆಯ ಕಂಪನವಾಗಿದ್ದು, ಎರಡನೇ ಬಾರಿ 5.7 ಹಾಗೂ ಮೂರನೇ 5.3 ತೀವ್ರತೆಯ ಭೂಕಂಪನವಾಗಿದೆ. ತಕ್ಷಣಕ್ಕೆ ಪ್ರಾಣ ಹಾನಿ ಅಥವಾ ಆಸ್ತಿ ಹಾನಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಸಬ್ ವೇಗಳನ್ನು ಬಂದ್ ಮಾಡಲಾಗಿದೆ.
ಭೂಕಂಪನದ ಕೇಂದ್ರ ಬಿಂದು ಇಟಲಿಯ ರಾಜಧಾನಿ ರೋಮ್ಂದ ಸುಮಾರು 100 ಕಿ.ಮೀ. ದೂರವಿರುವ ಅಮಾಟ್ರಿಕೆ ಎಂಬ ಪಟ್ಟಣದ ದಕ್ಷಿಣದಲ್ಲಿ ಪತ್ತೆಯಾಗಿದ್ದು, ಕಳೆದ ವರ್ಷ ಸಹ ಇದೇ ಪ್ರದೇಶದಲ್ಲಿ ಭೂಕಂಪನ ಸಂಭವಿಸಿತ್ತು.
ಅಬ್ರುಜೋ, ಜಾಜಿಯೋ, ಮಾರ್ಚೆ ಪ್ರದೇಶಗಳಲ್ಲಿ ಹಾಗೂ ರೋಮ್ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಕಳೆದ 36 ಗಂಟೆಗಳಿಂದ ನಿರಂತರವಾಗಿ ಹಿಮ ಬೀಳುತ್ತಿದ್ದು ಇಡೀ ಪ್ರದೇಶ ಹಿಮದಿಂದ ಆವೃತವಾಗಿದೆ. ಈ ಸಂದರ್ಭದಲ್ಲಿ ಭೂಕಂಪನ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡಚಣೆಯಾಗಿದೆ.
ಕಳೆದ ವರ್ಷ ಆಗಸ್ಟ್​ನಿಂದ ಅಕ್ಟೋಬರ್​ವರೆಗೆ ಇಟಲಿಯಲ್ಲಿ ಸರಣಿ ಭೂಕಂಪನ ಸಂಭವಿಸಿತ್ತು. ಮೊದಲಿಗೆ 6 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದಿರಿಂದಾಗಿ ಸುಮಾರು 300 ಜನರು ಮೃತಪಟ್ಟಿದ್ದರು ಮತ್ತು ಅಪಾರ ಪ್ರಮಾಣದ ಹಾನಿಯಾಗಿತ್ತು. ಆ ನಂತರ ಸಹ 6.5 ತೀವ್ರತೆಯ 2 ಭೂಕಂಪನ ಸಂಭವಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.