ವಿದೇಶ

ಚಂದ್ರನ ಮೇಲೆ ನಡೆದಾಡಿದ ಕೊನೆಯ ಗಗನಯಾತ್ರಿ ಯುಜೀನ್‌ ಸೆರ್ನಾನ್‌ ನಿಧನ

ಚಂದ್ರನ ಮೇಲೆ ಕೊನೆಯ ಬಾರಿಗೆ ನಡೆದಾಡಿ, ಭೂಮಿಗೆ ಎಲ್ಲಾ ಮಾನವ ಜನಾಂಗಕ್ಕೆ ಶಾಂತಿ ಮತ್ತು...

ಚಂದ್ರನ ಮೇಲೆ ನಡೆದಾಡಿದ ಕೊನೆಯ ಗಗನಯಾತ್ರಿ ಯುಜೀನ್‌ ಸೆರ್ನಾನ್‌ ನಿಧನ
ಮಾಜಿ ಗಗನಯಾತ್ರಿ ಜೀನ್ ಸೆರ್ನನ್ (ಸಂಗ್ರಹ ಚಿತ್ರ)
Published On :
ಯುಎಸ್ಎ: ಚಂದ್ರನ ಮೇಲೆ ಕೊನೆಯ ಬಾರಿಗೆ ನಡೆದಾಡಿ, ಭೂಮಿಗೆ ಎಲ್ಲಾ ಮಾನವ ಜನಾಂಗಕ್ಕೆ ಶಾಂತಿ ಮತ್ತು ಭರವಸೆ'ಯ ಸಂದೇಶದೊಂದಿಗೆ ಮರಳಿದ ಅಮೆರಿಕಾದ ಮಾಜಿ ಗಗನಯಾತ್ರಿ ಯುಜೀನ್‌ ಸೆರ್ನಾನ್‌   ನಿನ್ನೆ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.ಅನಾರೋಗ್ಯದಿಂದ ಸೆರ್ನಾನ್ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬದವರು ಹೇಳಿರುವುದಾಗಿ ನಾಸಾ ವಕ್ತಾರ ಬಾಬ್ ಜಾಕೊಬ್ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.
82ರ ಇಳಿವಯಸ್ಸಿನಲ್ಲಿ ಕೂಡ ಯುಜೀನ್‌ ಅವರು ಅಂತರಿಕ್ಷದಲ್ಲಿ ಮಾನವ ಸಂಶೋಧನೆಯನ್ನು ಮುಂದುವರಿಸುವುದನ್ನು ನೋಡುವ ಆಸೆ ವ್ಯಕ್ತಪಡಿಸುತ್ತಿದ್ದರು. ಚಂದ್ರನ ಮೇಲೆ ನಡೆದಾಡಿದ ಗಗನ ಸಖಿ ತಾವು ಕೊನೆಯವರಾಗಬಾರದು. ಇನ್ನೂ ಕೂಡ ಅನೇಕ ನಾಯಕರು, ಯುವಕರು ಹೋಗಿ ಬರಬೇಕೆಂದು ಬಯಸುತ್ತಿದ್ದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಸೆರ್ನಾನ್‌ ಅವರು 1996 ರ ಜೂನ್‌ ತಿಂಗಳಿನಲ್ಲಿ 'ಜೆಮಿನಿ 9 ಎ' ,1969 ರ ಮೇ ತಿಂಗಳಿನಲ್ಲಿ 'ಅಪೋಲೊ 10'  ಮತ್ತು 1972 ರಲ್ಲಿ  ಕೊನೆಯ ಮತ್ತು 3 ನೇಯ 'ಅಪೊಲೊ- 17 'ಬಾಹ್ಯಾಕಾಶ ಯಾನದ ಕಮಾಂಡರ್  ಆಗಿ ಚಂದ್ರಯಾನ ಕೈಗೊಂಡಿದ್ದರು. ಮೂರು ಬಾರಿ ಗಗನ ಯಾನ ನಡೆಸಿರುವ ಸೆರ್ನಾನ್‌ 2 ಬಾರಿ ಚಂದ್ರನ ಮೇಲೆ ಕಾಲಿಟ್ಟಿರುವುದು ಐತಿಹಾಸಿಕ ದಾಖಲೆಯಾಗಿ ಉಳಿದಿದೆ. 
ಇವರ ಬಗ್ಗೆ ಬರೆದ 'ದ ಲಾಸ್ಟ್ ಮ್ಯಾನ್ ಆನ್ ದ ಮೂನ್' ಪುಸ್ತಕ ಕಳೆದ ವರ್ಷ ಬಿಡುಗಡೆಯಾಗಿತ್ತು.ಇದುವರೆಗೆ ಚಂದ್ರನ ಮೇಲ್ಮೈ ಮೇಲೆ ಪಾದವಿರಿಸಿದ ಕೊನೆಯ ಮಾನವ ಎಂಬ ಕೀರ್ತಿ ಇವರದಾಗಿದ್ದು, ಅವರ ನಿಧನಕ್ಕೆ ನಾಸಾ ತೀವ್ರ ಕಂಬನಿ ಮಿಡಿದಿದೆ. 
ಸೆರ್ನಾನ್‌ ಅವರು ಪತ್ನಿ  ಜಾನ್‌,ಓರ್ವ ಪುತ್ರಿ, ಇಬ್ಬರು ಮಲಮಕ್ಕಳು ಮತ್ತು 9 ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.