ಪಾಕಿಸ್ತಾನದಿಂದ ಅಣುಯುದ್ಧದ ಅಪಾಯ ಸೃಷ್ಟಿಸುವ ಕೆಲಸ: ಅಮೆರಿಕ ಕಿಡಿ
ಅಮೆರಿಕದ ಉಪಾಧ್ಯಕ್ಷ ಜೋಯೆ ಬಿಡನ್ ಪಾಕಿಸ್ತಾನ, ಉತ್ತರ ಕೊರಿಯಾ, ರಷ್ಯಾ ಸೇರಿದಂತೆ ಕೆಲವು ರಾಷ್ಟ್ರಗಳು ಅಣುಯುದ್ಧ ನಡೆಯುವಂತಹ ಕೆಲಸಗಳನ್ನು ಮಾಡಿವೆ ಎಂದು ಕಿಡಿಕಾರಿದ್ದಾರೆ.

Published On :
ವಾಷಿಂಗ್ ಟನ್: ಅಮೆರಿಕದ ಕಾಂಗ್ರೆಸ್ ನಲ್ಲಿ ಅಣ್ವಸ್ತ್ರ ಭಯೋತ್ಪಾದನೆ ಬಗ್ಗೆ ಮಾತನಾಡಿರುವ ಅಮೆರಿಕದ ಉಪಾಧ್ಯಕ್ಷ ಜೋಯೆ ಬಿಡನ್, ಪಾಕಿಸ್ತಾನ, ಉತ್ತರ ಕೊರಿಯಾ, ರಷ್ಯಾ ಸೇರಿದಂತೆ ಕೆಲವು ರಾಷ್ಟ್ರಗಳು ಅಣುಯುದ್ಧ ನಡೆಯುವಂತಹ ಕೆಲಸಗಳನ್ನು ಮಾಡಿವೆ ಎಂದು ಕಿಡಿಕಾರಿದ್ದಾರೆ.
ಪಾಕಿಸ್ತಾನ, ಉತ್ತರ ಕೊರಿಯಾದ ಕೆಲವು ನಡೆಗಳಿಂದ ಯೂರೋಪ್, ದಕ್ಷಿಣ ಏಷ್ಯಾ, ಪೂರ್ವ ಏಷ್ಯಾಗಳಲ್ಲಿ ಪ್ರಾದೇಶಿಕ ಅಣಿಯುದ್ಧ ನಡೆಯುವ ಅಪಾಯ ಎದುರಾಗಿದೆ, ಇದನ್ನು ಮುಂಬರುವ ಅಮೆರಿಕ ಸರ್ಕಾರ ಸಮರ್ಥವಾಗಿ ನಿರ್ವಹಿಸಬೇಕೆಂದು ಬಿಡನ್ ತಿಳಿಸಿದ್ದಾರೆ.
ಒಂದೇ ಒಂದು ಅಣುಬಾಂಬ್ ಸಿಡಿದರೂ ಸಹ ಅದು ಅಪಾಯಕಾರಿಯಾಗಬಲ್ಲದು. ಆದ್ದರಿಂದಲೇ ಕಳೆದ 8 ವರ್ಷಗಳ ಹಿಂದೆ ನಾನು ಮತ್ತು ಬರಾಕ್ ಒಬಾಮ ಅಧಿಕಾರ ವಹಿಸಿಕೊಂಡಾಗ ಅಣುದಾಳಿಗಳನ್ನು ತಡೆಗಟ್ಟುವುದು ನಮ್ಮ ರಾಷ್ಟ್ರೀಯ ಅದ್ಯತೆಗಳಲ್ಲಿ ಒಂದಾಗಿತ್ತು ಎಂದು ಬಿಡನ್ ಹೇಳಿದ್ದಾರೆ.
ಭಯೋತ್ಪಾದಕರಿಗೆ ಅಣು ಸಾಮಗ್ರಿಗಳನ್ನು ಶಸ್ತ್ರಾಸ್ತ್ರಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವುದಕ್ಕೆ ಒಂದೇ ರಾಷ್ಟ್ರದಿಂದ ಸಾಧ್ಯವಿಲ್ಲ ಎಂದು ಬಿಡನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


