ವಿದೇಶ

ನೇಪಾಳಕ್ಕೆ 1 ಬಿಲಿಯನ್ ರೂಪಾಯಿ ಮೊತ್ತದ 100 ರೂ ನೋಟುಗಳನ್ನು ನೀಡಲಿರುವ ಆರ್ ಬಿಐ

ನೇಪಾಳದಲ್ಲಿ 100 ರೂ ಮುಖಬೆಲೆಯ ನೋಟುಗಳ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 100 ರೂ ಮುಖಬೆಲೆಯ 1 ಬಿಲಿಯನ್ ರೂಪಾಯಿ ನಷ್ಟು ಮೊತ್ತದ ಹಣವನ್ನು ರವಾನೆ ಮಾಡಲಿದೆ.

ನೇಪಾಳಕ್ಕೆ 1 ಬಿಲಿಯನ್ ರೂಪಾಯಿ ಮೊತ್ತದ 100 ರೂ ನೋಟುಗಳನ್ನು ನೀಡಲಿರುವ ಆರ್ ಬಿಐ
ನೇಪಾಳ ರಾಷ್ಟ್ರ ಬ್ಯಾಂಕ್ (ಸಂಗ್ರಹ ಚಿತ್ರ)
Published On :
ಕಠ್ಮಂಡು: ನೇಪಾಳದಲ್ಲಿ 100 ರೂ ಮುಖಬೆಲೆಯ ನೋಟುಗಳ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 100 ರೂ ಮುಖಬೆಲೆಯ  1 ಬಿಲಿಯನ್ ರೂಪಾಯಿ ನಷ್ಟು ಮೊತ್ತದ ಹಣವನ್ನು ರವಾನೆ ಮಾಡಲಿದೆ. 
ನ.8 ರಂದು ಕೇಂದ್ರ ಸರ್ಕಾರ 500, 1000 ರೂ ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ್ದ ಹಿನ್ನೆಲೆಯಲ್ಲಿ ನೇಪಾಳ ರಾಷ್ಟ್ರ ಬ್ಯಾಂಕ್ ಆರ್ ಬಿಐ ನಿಂದ 100 ರೂ ಮುಖಬೆಲೆಯ ನೋಟುಗಳನ್ನು ಆಮದು ಮಾಡಿಕೊಳ್ಳಲು ತಡವಾಗಿದೆ ಎಂದು ಅಲ್ಲಿನ ಹಿಮಾಲಯನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. 
ನೇಪಾಳದಲ್ಲಿ 100 ರೂ ಮುಖಬೆಲೆಯ ನೋಟುಗಳ ಕೊರತೆ ಎದುರಾಗಿದ್ದ ಹಿನ್ನೆಲೆಯಲ್ಲಿ ನೇಪಾಳ ರಾಷ್ಟ್ರ ಬ್ಯಾಂಕ್, ಆರ್ ಬಿಐ ಗೆ 100 ರೂ ಮುಖಬೆಲೆಯ ನೋಟುಗಳನ್ನು ರಫ್ತು ಮಾಡುವಂತೆ ಮನವಿ ಮಾಡಿತ್ತು. ನೇಪಾಳದ ಮನವಿಗೆ ಪ್ರತಿಕ್ರಿಯಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್, ಭಾರತದಲ್ಲಿ ಗರಿಷ್ಠ ಮುಖಬೆಲೆಯ ನೋಟು ಅಮಾನ್ಯ ನಿರ್ಧಾರದಿಂದ ಕಡಿಮೆ ಮುಖಬೆಲೆಯ ನೋಟುಗಳಿಗೆ ಬೇಡಿಕೆ ಹೆಚ್ಚಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಕಾಯುವಂತೆ ತಿಳಿಸಿತ್ತು. ಈಗ ಆರ್ ಬಿಐ ನೇಪಾಳದ ಮನವಿಗೆ ಸ್ಪಂದಿಸಿದ್ದು ನೇಪಾಳಕ್ಕೆ 100 ರೂ ಮುಖಬೆಲೆಯ  1 ಬಿಲಿಯನ್ ರೂಪಾಯಿ ನಷ್ಟು ಮೊತ್ತದ ಹಣವನ್ನು ರಫ್ತು ಮಾಡಲು ಸಿದ್ಧತೆ ನಡೆಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.