ವಿದೇಶ

ಮತ್ತೆ ಉಗ್ರ ಬುರ್ಹಾನ್ ವಾನಿಯನ್ನು ಕೊಂಡಾಡಿದ ಷರೀಫ್

ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಬುರ್ಹಾನ್ ವಾನಿಯನ್ನು ಮತ್ತೆ ಹೊಗಳಿಸಿದ್ದು, ಬುರ್ಹಾನಿಯೊಬ್ಬ ಆಕರ್ಷಕ ಹಾಗೂ ಉತ್ತಮ ವರ್ಚಸ್ಸು ಹೊಂದಿದ್ದ ನಾಯಕನಾಗಿದ್ದ ಎಂದು ಗುರುವಾರ...

ಮತ್ತೆ ಉಗ್ರ ಬುರ್ಹಾನ್ ವಾನಿಯನ್ನು ಕೊಂಡಾಡಿದ ಷರೀಫ್
ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್
Published On :

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಬುರ್ಹಾನ್ ವಾನಿಯನ್ನು ಮತ್ತೆ ಹೊಗಳಿಸಿದ್ದು, ಬುರ್ಹಾನಿಯೊಬ್ಬ ಆಕರ್ಷಕ ಹಾಗೂ ಉತ್ತಮ ವರ್ಚಸ್ಸು ಹೊಂದಿದ್ದ ನಾಯಕನಾಗಿದ್ದ ಎಂದು ಗುರುವಾರ ಹೇಳಿದ್ದಾರೆ.

ಕಾಶ್ಮೀರ ಕುರಿತಂತೆ ಅಂತಾರಾಷ್ಟ್ರೀಯ ಸಂಸದೀಯ ವಿಚಾರ ಸಂಕಿರಣದಲ್ಲಿ ಮತಾನಾಡಿರುವ ಅವರು, ಕಾಶ್ಮೀರದಲ್ಲಿರುವ ಯುವ ಜನತೆ ಸಂಕಷ್ಟವನ್ನು ಎದುರಿಸುತ್ತಿದ್ದು, ಇದಕ್ಕೆ ಅಂತ್ಯ ಹಾಡಬೇಕಿದೆ. ಕಾಶ್ಮೀರ ವಿಚಾರದಲ್ಲಿ ತನ್ನ ವರ್ತನೆಯನ್ನು ನಿಲ್ಲಿಸುವಂತೆ ಇಡೀ ವಿಶ್ವ ಭಾರತಕ್ಕೆ ತಿಳಿಸಬೇಕಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಕಾಶ್ಮೀರದಲ್ಲಿ ಭದ್ರತಾ ಪಡೆಯ ಗುಂಡಿಗೆ ಹತ್ಯೆಯಾದ ಉಗ್ರ ಬುರ್ಹಾನ್ ವಾನಿಯನ್ನು ಕೊಂಡಾಡಿರವ ಅವರು, ಹುತಾತ್ಮನಾದ ವಾನಿ ಸ್ವಾತಂತ್ರ್ಯ ಪ್ರೀತಿಸುವ ಜನರಿಗೆ ಪುನಶ್ಚೇತನ ಬಿಂದುವಾಗಿದ್ದ. ಕಾಶ್ಮೀರ ಜನತೆಗೆ 70 ವರ್ಷಗಳ ಹಿಂದೆಯೇ ಪ್ರಮಾಣವೊಂದನ್ನು ಮಾಡಲಾಗಿತ್ತು. ಕೇವಲ ಪಾಕಿಸ್ತಾನವಲ್ಲ ವಿಶ್ವಸಂಸ್ಥೆ ಕೂಡ ಪ್ರಮಾಣ ಮಾಡಿತ್ತು. ಜನತೆ ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾರೆಂಬುದನ್ನು ಭಾರತ ತಿಳಿಯಬೇಕಿದೆ. ಕಾಶ್ಮೀರ ಜನತೆಯ ಸಂಕಷ್ಟವನ್ನು ವಿಶ್ವಸಂಸ್ಥೆಯ ಗಮನಕ್ಕೆ ತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕಾಶ್ಮೀರ ಜನತೆಗೆ ಪಾಕಿಸ್ತಾನ ಎಂದಿಗೂ ಬೆಂಬಲವನ್ನು ನೀಡಲಿದೆ ಎಂದು ಹೇಳಿದ್ದಾರೆಂದು ಡಾನ್ ವರದಿ ಮಾಡಿದೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸಂಸದೀಯ ಜಂಟಿ ಅಧಿವೇಶನಲ್ಲಿ ಮಾತನಾಡಿದ್ದ ಷರೀಫ್ ಅವರು ಉಗ್ರ ಬುರ್ಹಾನ್ ವಾನಿಯನ್ನು ಹೊಗಳಿದ್ದರು. ಉಗ್ರ ಕಮಾಂಡರ್ ಬುರ್ಹಾನ್ ವಾನಿಯನ್ನು ಕಾಶ್ಮೀರ ನಾಯಕ, ಯುವ ನಾಯಕನಾಗಿದ್ದ., ಕಾಶ್ಮೀರ ಪ್ರಜೆಗಳ ಮೇಲೆ ಭಾರತೀಯ ಯೋಧರ ಬಲ ಪ್ರದರ್ಶನ ನಿಜಕ್ಕೂ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತದೆ. ಮುಖಂಡನ ಸಾವನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ  ದೌರ್ಜನ್ಯ ಸರಿಯಲ್ಲ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರುದು. ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಮಾತುಕೊಟ್ಟಂತೆ ಭಾರತ ಕಾಶ್ಮೀರ ಪ್ರಜೆಗಳ ಮಾನವಹಕ್ಕುಗಳ ರಕ್ಷಣೆ  ಮಾಡಬೇಕು ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.