ವಿದೇಶ

ಕೊನೆಗೂ 'ಹಿಂದೂ ವಿವಾಹ ಕಾಯ್ದೆ'ಗೆ ಪಾಕ್ ಸೆನೆಟ್ ಅನುಮೋದನೆ

ಸುಪ್ರೀಂ ಆದೇಶದ ನಡುವೆಯೂ ಹಿಂದೂ ವಿವಾಹ ಕಾಯ್ದೆಯನ್ನು ಜಾರಿಗೊಳಿಸದೆ ತೀವ್ರ ಟೀಕೆಗೆ ಒಳಗಾಗಿದ್ದ ಪಾಕಿಸ್ತಾನ ಸೆನೆಟ್ ಸಮಿತಿ, ಕೊನೆಗೂ ಹಿಂದೂ ವಿವಾಹ ಮಸೂದೆ ಕರಡಿಗೆ ಅನುಮೋದನೆ ನೀಡಿದೆ...

ಕೊನೆಗೂ 'ಹಿಂದೂ ವಿವಾಹ ಕಾಯ್ದೆ'ಗೆ ಪಾಕ್ ಸೆನೆಟ್ ಅನುಮೋದನೆ
ಸಾಂದರ್ಭಿಕ ಚಿತ್ರ
Published On :

ಇಸ್ಲಾಮಾಬಾದ್: ಸುಪ್ರೀಂ ಆದೇಶದ ನಡುವೆಯೂ ಹಿಂದೂ ವಿವಾಹ ಕಾಯ್ದೆಯನ್ನು ಜಾರಿಗೊಳಿಸದೆ ತೀವ್ರ ಟೀಕೆಗೆ ಒಳಗಾಗಿದ್ದ ಪಾಕಿಸ್ತಾನ ಸೆನೆಟ್ ಸಮಿತಿ, ಕೊನೆಗೂ ಹಿಂದೂ ವಿವಾಹ ಮಸೂದೆ ಕರಡಿಗೆ ಅನುಮೋದನೆ ನೀಡಿದ್ದು ಈ ಮೂಲಕ ಮಹತ್ವದ ನಿರ್ಧಾರವೊಂದನ್ನು ಮಂಗಳವಾರ ತೆಗೆದುಕೊಂಡಿದೆ.

ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಕೌಟುಂಬಿಕ ಕಾನೂನಿನ ಅವಕಾಶ ನೀಡುವ ಸಲುವಾಗಿ ಪಾಕಿಸ್ತಾನ ಸೆನೆಟ್ ಸಮಿತಿ ಹಿಂದೂ ವಿವಾಹ ಮಸೂದೆಯ ಕರಡನ್ನು ಅನುಮೋದಿಸಿದೆ.

ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ಇದೊಂದು ಮಹತ್ವದ ಮಸೂದೆಯಾಗಿದ್ದು. ಇನ್ನುಮುಂದೆ ಪಾಕಿಸ್ತಾನದಲ್ಲಿರುವ ಹಿಂದೂಗಳು ತಮ್ಮ ವಿವಾದ ನೋಂದಣಿಗೆ ಮತ್ತು ವಿಚ್ಛೇದನ ಪ್ರಕರಣಗಳನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಲು ಸಹಾಯಕವಾಗಲಿದೆ.

ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಹಿಂದೂ ವಿವಾಹ ಕಾಯ್ದೆ ಕರಡಿಗೆ ನ್ಯಾಷನಲ್ ಅಸೆಂಬ್ಲಿ ಅನುಮೋದನೆ ನೀಡಿತ್ತು. ನಾಲ್ಕು ತಿಂಗಳ ಬಳಿಕ ಸಂಸದ ನಸ್ರೀನ್ ಜಲೀಲ್ ನೇತೃತ್ವದ ಸೆನೆಟ್ ಮಾನವ ಹಕ್ಕುಗಳ ಕಾರ್ಯಕಾರಿ ಸಮಿತಿಯು ಮಸೂದೆಗೆ ಅವಿರೋಧವಾಗಿ ಅನುಮೋದನೆ ನೀಡಿದೆ. ಸಂಸತ್ ಮೇಲ್ಮನೆ ಸೆನೆಟ್ ಅಂಗೀಕಾರ ದೊರೆತ ಬಳಿಕ 'ಹಿಂದೂ ವಿವಾಹ ಮಸೂದೆ 2016' ಕಾಯ್ದೆ ರೂಪ ಪಡೆದುಕೊಳ್ಳಲಿದೆ.

ಅನುಮೋದನೆ ಪಡೆದುಕೊಂಡಿರುವ ಈ ಕಾಯ್ದೆಯು ದಂಪತಿಗಳು ಪರಸ್ಪರ ಪ್ರತ್ಯೇಕಗೊಂಡಾಗ ಮರುಮದುವೆಯಾಗಲು ಈ ಕಾಯ್ದೆ ಅನುಮತಿ ನೀಡಲಿದೆ. ಪತಿ ಮರಣದ 6 ತಿಂಗಳ ಬಳಿಕ ಸ್ವ ಇಚ್ಛೆಯಿಂದ ಮಹಿಳೆಯರು ಮತ್ತೊಂದು ಮದುವೆಯಾಗಲು ಈ ಮಸೂದೆ ಅವಕಾಶ ನೀಡಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.