ಮಾಧ್ಯಮ, ಅಮೆರಿಕ ಜನತೆಯ ಶತ್ರು: ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಧ್ಯಮಗಳ ಮೇಲೆ ಮತ್ತೆ ಹರಿಹಾಯ್ದಿದ್ದು, ಮಾಧ್ಯಮಗಳು ಅಮೆರಿಕ ಜನತೆಯ ಶತ್ರು ಎಂದು ಆರೋಪಿಸಿದ್ದಾರೆ.

Published On :
ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಧ್ಯಮಗಳ ಮೇಲೆ ಮತ್ತೆ ಹರಿಹಾಯ್ದಿದ್ದು, ಮಾಧ್ಯಮಗಳು ಅಮೆರಿಕ ಜನತೆಯ ಶತ್ರು ಎಂದು ಆರೋಪಿಸಿದ್ದಾರೆ.
ಸುಳ್ಳು ಸುದ್ದಿಗಳನ್ನು ಬಿತ್ತರಿಸುವ ಮಾಧ್ಯಮಗಳು ( ನ್ಯೂಯಾರ್ಕ್ ಟೈಮ್ಸ್, ಎನ್ ಬಿಸಿ ನ್ಯೂಸ್, ಎಬಿಸಿ, ಸಿಬಿಎಸ್, ಸಿಎನ್ಎನ್) ನ್ಯೂಸ್ ಗಳು ನನ್ನ ವಿರೋಧಿಗಳಲ್ಲ. ಅಮೆರಿಕ ಜನತೆಯ ವಿರೋಧಿಗಳು ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ನನ್ನ ಆಡಳಿತ ಸುಗಮವಾಗಿ ನಡೆಯುತ್ತಿದೆ. ಮಾಧ್ಯಮಗಳು ವರದಿ ಪ್ರಕಟಿಸುತ್ತಿರುವಂತೆ ಯಾವುದೇ ಭಿನ್ನಾಭಿಪ್ರಾಯ, ಸಮಸ್ಯೆಗಳಿಲ್ಲ ಎಂದು ಸ್ಪಷ್ಟನೆ ನೀಡಿರುವ ಟ್ರಂಪ್ ಅಮೆರಿಕಾ ಮಾಧ್ಯಮಗಳು ಜನತೆಯ ವಿರೋಧಿ ಎಂದು ಹೇಳಿದ್ದಾರೆ.
ಶ್ವೇತ ಭವನದಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಟ್ವಿಟರ್ ನಲ್ಲಿ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದು, ಟೀಕಿಸಿದ್ದಾರೆ. ಸಮಾನ್ಯವಾಗಿ ಮಾಧ್ಯಮಗಳನ್ನು ಟೀಕಿಸುವ ಡೊನಾಲ್ಡ್ ಟ್ರಂಪ್ ಜ.20 ರಿಂದ ಪ್ರಾರಂಭವಾದ ತಮ್ಮ ಆಡಳಿತದ ಬಗ್ಗೆ ಹಾಗೂ ಆಡಳಿತದ ಕಾರ್ಯಕ್ಷಮತೆ ಬಗ್ಗೆ ಜನರು ಸಂತಸದಿಂದ ಇದ್ದಾರೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


