ಕದನ ವಿರಾಮ ಉಲ್ಲಂಘನೆ: ಭಾರತದ ಡೆಪ್ಯೂಟಿ ಹೈಕಮಿಷನರ್ ಗೆ ಪಾಕ್ ಸಮನ್ಸ್
ಭಾರತದ ಡೆಪ್ಯೂಟಿ ಹೈಕಮಿಷನರ್ ಗೆ ಮಂಗಳವಾರ ಸಮನ್ಸ್ ನೀಡಿರುವ ಪಾಕಿಸ್ತಾನ, ಕದನ ವಿರಾಮ ಉಲ್ಲಂಘಿಸಿದ....

Published On :
ಇಸ್ಲಾಮಾಬಾದ್: ಭಾರತದ ಡೆಪ್ಯೂಟಿ ಹೈಕಮಿಷನರ್ ಗೆ ಮಂಗಳವಾರ ಸಮನ್ಸ್ ನೀಡಿರುವ ಪಾಕಿಸ್ತಾನ, ಕದನ ವಿರಾಮ ಉಲ್ಲಂಘಿಸಿದ ಭಾರತೀಯ ಸೇನೆಯ ಕ್ರಮವನ್ನು ಖಂಡಿಸಿದೆ.
ನಿನ್ನೆ ಗಡಿ ನಿಯಂತ್ರಣ ರೇಖೆಯ ತಂಬ್ ಪ್ರದೇಶದಲ್ಲಿ ಭಾರತೀಯ ಸೇನೆ ನಡೆಸಿದ ಅಪ್ರಚೋದಿತ ಗುಂಡನಿ ದಾಳಿಯಲ್ಲಿ ಮೂವರು ಪಾಕ್ ಯೋಧರು ಹುತಾತ್ಮರಾಗಿದ್ದು, ಈ ಸಂಬಂಧ ಮಹಾ ನಿರ್ದೇಶಕ( ದಕ್ಷಿಣ ಏಷ್ಯಾ ಮತ್ತು ಸರ್ಕಾರ) ಡಾ.ಮೊಹಮ್ಮದ್ ಫೈಸಾಲ್ ಅವರು ಭಾರತೀಯ ಡೆಪ್ಯೂಟಿ ಹೈಕಮಿಷನರ್ ಜೆ.ಪಿ.ಸಿಂಗ್ ಅವರಿಗೆ ಸಮನ್ಸ್ ನೀಡಿದ್ದಾರೆ ಮತ್ತು ಅಪ್ರಚೋದಿತ ದಾಳಿಯನ್ನು ಖಂಡಿಸಿದ್ದಾರೆ ಎಂದು ವಿದೇಶಾಂಗ ಕಚೇರಿಯ ವಕ್ತಾರ ನಫೀಸ್ ಝಕಾರಿಯಾ ಅವರು ಹೇಳಿದ್ದಾರೆ.
ನಾಗರಿಕರನ್ನು ಮತ್ತು ಸೈನಿಕರನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿದ್ದು ಖಂಡನೀಯ. ಮಾನವ ಘನತೆ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಹಾಗೂ ಮಾನವೀಯ ಕಾನೂನಿಗೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಹಾ ನಿರ್ದೇಶಕ ಡಾ.ಮೊಹಮ್ಮದ್ ಫೈಸಾಲ್ ಅವರು 2003ರ ಕದನ ವಿರಾಮ ನಿಯಮವನ್ನು ಗೌರವಿಸುವಂತೆ ಭಾರತಕ್ಕೆ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


