ಉಗ್ರ ಸಯೀದ್ ರ್ಯಾಲಿಯಲ್ಲಿ ಪ್ಯಾಲೆಸ್ತೀನ್ ರಾಯಭಾರಿ: ಪಾಕಿಸ್ತಾನ ಸಮರ್ಥನೆ
26/11 ಮುಂಬೈ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಹಾಗೂ ನಿಷೇಧಿತ ಜೆಯುಡಿ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನಡೆಸಿದ್ದ ರ್ಯಾಲಿಯಲ್ಲಿ ಪ್ಯಾಲೆಸ್ತೀನ್ ರಾಯಭಾರಿ ಭಾಗಿಯಾಗಿದ್ದರನ್ನು ಪಾಕಿಸ್ತಾನ ಭಾನುವಾರ ಸಮರ್ಥಿಸಿಕೊಂಡಿದೆ...

Published On :
ಇಸ್ಲಾಮಾಬಾದ್; 26/11 ಮುಂಬೈ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಹಾಗೂ ನಿಷೇಧಿತ ಜೆಯುಡಿ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನಡೆಸಿದ್ದ ರ್ಯಾಲಿಯಲ್ಲಿ ಪ್ಯಾಲೆಸ್ತೀನ್ ರಾಯಭಾರಿ ಭಾಗಿಯಾಗಿದ್ದರನ್ನು ಪಾಕಿಸ್ತಾನ ಭಾನುವಾರ ಸಮರ್ಥಿಸಿಕೊಂಡಿದೆ.
ಕೆಲ ದಿನಗಳ ಹಿಂದಷ್ಟೇ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ರ್ಯಾಲಿಯೊಂದನ್ನು ಏರ್ಪಡಿಸಿದ್ದ. ರ್ಯಾಲಿಯಲ್ಲಿ ಪ್ಯಾಲೆಸ್ತೀನ್ ರಾಯಭಾರಿ ಉಪಸ್ಥಿತಿ ಇದ್ದುದ್ದನ್ನು ಭಾರತ ತೀವ್ರವಾಗಿ ಖಂಡಿಸಿತ್ತು. ಬಳಿಕ ಈ ಬೆಳವಣಿಗೆಗೆ ವಿಷಾಯ ವ್ಯಕ್ತಪಡಿಸಿದ್ದ ಪ್ಯಾಲೆಸ್ತೀನ್ ಪಾಕಿಸ್ತಾನದಲ್ಲಿದ್ದ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿತ್ತು.
ಸಯೀದ್ ರ್ಯಾಲಿಯಲ್ಲಿ ಪ್ಯಾಲೆಸ್ತೀನ್ ರಾಯಭಾರಿ ಭಾಗಿಯಾಗಿದ್ದನ್ನು ಇದೀಗ ಪಾಕಿಸ್ತಾನ ಸಮರ್ಥಿಸಿಕೊಂಡಿದ್ದು, ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ, ರ್ಯಾಲಿಯಲ್ಲಿ ಪ್ಯಾಲೆಸ್ತೀನ್ ರಾಯಭಾರಿ ಭಾಗಿಯಾಗಿದ್ದಕ್ಕೆ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗತೊಡಗಿವೆ. ವಾಕ್ ಸ್ವಾತಂತ್ರಯಕ್ಕೆ ವಿಶ್ವಸಂಸ್ಥೆ ಯಾವುದೇ ನಿರ್ಬಂಧಗಳನ್ನು ಹಾಕಿಲ್ಲ. ರ್ಯಾಲಿಯಲ್ಲಿ ಪ್ಯಾಲೆಸ್ತೀನ್ ರಾಯಭಾರಿ ಭಾಗಿಯಾಗಿದ್ದನ್ನು ಪಾಕಿಸ್ತಾನ ಗೌರವಿಸುತ್ತದೆ ಎಂದು ಹೇಳಿದ್ದಾರೆ.
ಎರಡು ರಾಷ್ಟ್ರಗಳ ಪರಿಹಾರವನ್ನು ಪಾಕಿಸ್ತಾನ ಎಂದಿಗೂ ಬೆಂಬಲಿಸುತ್ತದೆ. ಪ್ಯಾಲೆಸ್ತೀನ್ ರಾಯಭಾರಿ ಪಾಕಿಸ್ತಾನದಲ್ಲಿ ನಡೆದ ಸಾಕಷ್ಟು ಸಭೆಗಳಲ್ಲಿ ಭಾಗಿಯಾಗಿದ್ದಾರೆ. ರ್ಯಾಲಿಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ರ್ಯಾಲಿಯಲ್ಲಿ ಲಷ್ಕರ್-ಇ-ತೊಯ್ಬಾ ಮುಖ್ಯಸ್ಥ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಭಾಷಣ ಮಾಡಿದ್ದರು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistanಪಾಕಿಸ್ತಾನIndian GovernmentHafiz Saeedಹಫೀಜ್ ಸಯ್ಯೀದ್ಭಾರತ ಸರ್ಕಾರPalestine envoyಪಾಲೆಸ್ತೀನ್ ರಾಯಭಾರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


