ಉಗ್ರ ಸಯೀದ್ ಜತೆ ವೇದಿಕೆ ಹಂಚಿಕೊಂಡ ರಾಯಭಾರಿಯನ್ನು ವಾಪಸ್ ಕರೆಸಿಕೊಂಡ ಪ್ಯಾಲೆಸ್ತೀನ್
ತನ್ನ ರಾಯಭಾರಿ ವಲೀದ್ ಅಬು ಅಲೀ ಮುಂಬೈ ದಾಳಿ ರೂವಾರಿ ಹಾಗೂ ಕುಖ್ಯಾತ ಭಯೋತ್ಪಾದಕ ಹಫೀಜ್ ಸಯೀದ್ ಜತೆ ವೇದಿಕೆ ಹಂಚಿಕೊಂಡಿದ್ದಕ್ಕೆ...

Published On :
ಪ್ಯಾಲೆಸ್ತೀನ್/ನವದೆಹಲಿ: ತನ್ನ ರಾಯಭಾರಿ ವಲೀದ್ ಅಬು ಅಲೀ ಮುಂಬೈ ದಾಳಿ ರೂವಾರಿ ಹಾಗೂ ಕುಖ್ಯಾತ ಭಯೋತ್ಪಾದಕ ಹಫೀಜ್ ಸಯೀದ್ ಜತೆ ವೇದಿಕೆ ಹಂಚಿಕೊಂಡಿದ್ದಕ್ಕೆ ಪ್ಯಾಲೆಸ್ತೀನ್ ವಿಷಾದ ವ್ಯಕ್ತಪಡಿಸಿದ್ದು ರಾಯಭಾರಿಯನ್ನು ಸ್ವದೇಶಕ್ಕೆ ವಾಪಸ್ ಕರೆಸಿಕೊಂಡಿದೆ.
ಉಗ್ರ ಹಫೀಜ್ ಸಯೀದ್ ಏರ್ಪಡಿಸಿದ್ದ ರ್ಯಾಲಿಯಲ್ಲಿ ತನ್ನ ರಾಯಭಾರಿ ಉಪಸ್ಥಿತರಿದ್ದರೆಂಬ ವಿಷಯದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿ, ತಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಪ್ಯಾಲೆಸ್ತೀನ್ ಭಾರತ ಸರ್ಕಾರಕ್ಕೆ ಭರವಸೆ ನೀಡುವುದಾಗಿ ಈ ಬಗ್ಗೆ ವಿದೇಶ ವ್ಯವಹಾರಗಳ ಸಚಿವಾಲಯ ಅಧಿಕೃತ ಹೇಳಿಕೆಯನ್ನು ಹೊರಡಿಸಿದೆ.
ಪಾಕಿಸ್ತಾನದಲ್ಲಿನ ಪ್ಯಾಲೆಸ್ತೀನ್ ರಾಯಭಾರಿ ವಲೀದ್ ಅಬು ಅಲೀ ಉಗ್ರನ ಜತೆ ವೇದಿಕೆ ಹಂಚಿಕೊಂಡಿದ್ದಕ್ಕೆ ತೀವ್ರವಾಗಿ ಖಂಡಿಸಿದ್ದ ಭಾರತ ಸರ್ಕಾರ ಅತ್ಯಂತ ಕಠಿಣ ಪದಗಳನ್ನು ಒಳಗೊಂಡ ಖಂಡನಾ ಪತ್ರವನ್ನು ಪ್ಯಾಲೆಸ್ತೀನ್ ಸರ್ಕಾರಕ್ಕೆ ರವಾನಿಸಿತ್ತು.
ಹಫೀಜ್ ಸಯೀದ್ ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆಯೇ ಪರಿಗಣಿಸಿದ್ದು ಇಂತಹ ವ್ಯಕ್ತಿಯೊಂದಿಗೆ ಪ್ಯಾಲೆಸ್ತೀನ್ ರಾಯಭಾರಿ ಸಖ್ಯ ಹೊಂದುವುದು ಎಷ್ಟು ಮಾತ್ರಕ್ಕೂ ನಮಗೆ ಒಪ್ಪಿತವಾದುದಲ್ಲ ಎಂದು ಪ್ಯಾಲೆಸ್ತೀನ್ ಸರ್ಕಾರಕ್ಕೆ ಭಾರತ ಕಠಿಣವಾಗಿ ಹೇಳಿತ್ತು.
ಪ್ಯಾಲೆಸ್ತೀನ್ ನ ಪಾಕಿಸ್ತಾನ ರಾಯಭಾರಿ ವಲೀದ್ ಅಬು ಅಲೀ ಅವರು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಜೆಯುಡಿ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯ್ಯೀದ್ ನೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಬಗೆಗಿನ ಫೋಟೋಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡಿತ್ತು. ಇದೀಗ ಈ ವಿಚಾರ ಭಾರತ ಸರ್ಕಾರದ ಗಮನಕ್ಕೂ ಬಂದಿದ್ದು, ಕೇಂದ್ರ ವಿದೇಶಾಂಗ ಇಲಾಖೆ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiPakistanಪಾಕಿಸ್ತಾನIndian GovernmentHafiz Saeedಹಫೀಜ್ ಸಯ್ಯೀದ್ಭಾರತ ಸರ್ಕಾರPalestine envoyಪಾಲೆಸ್ತೀನ್ ರಾಯಭಾರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


