ವಿದೇಶ

ಮುಸ್ಲಿಂ ಪತಿಯೊಡನೆ ವಾಸಿಸಲು ಹಿಂದೂ ಪತ್ನಿಗೆ ಅನುಮತಿಸಿದ ಪಾಕ್ ನ್ಯಾಯಾಲಯ

ಸ್ಲಾಂ ಧರ್ಮಕ್ಕೆ ಮತಾಂತರಗೊಂಡ 21 ವರ್ಷದ ಹಿಂದು ಮಹಿಳೆ ಪಾಕಿಸ್ತಾನದ ತನ್ನ ಮುಸ್ಲಿಂ ಗಂಡನೊಂದಿಗೆ ವಾಸಿಸಲು ಪಾಕಿಸ್ತಾನ ನ್ಯಾಯಾಲಯವು ಅನುಮತಿ ನೀಡಿದೆ,

ಮುಸ್ಲಿಂ ಪತಿಯೊಡನೆ ವಾಸಿಸಲು ಹಿಂದೂ ಪತ್ನಿಗೆ ಅನುಮತಿಸಿದ ಪಾಕ್ ನ್ಯಾಯಾಲಯ
ಮುಸ್ಲಿಂ ಪತಿಯೊಡನೆ ವಾಸಿಸಲು ಹಿಂದೂ ಪತ್ನಿಗೆ ಅನುಮತಿಸಿದ ಪಾಕ್ ನ್ಯಾಯಾಲಯ
Published On :
ಇಸ್ಲಾಮಾಬಾದ್: ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ 21 ವರ್ಷದ ಹಿಂದು ಮಹಿಳೆ ಪಾಕಿಸ್ತಾನದ ತನ್ನ ಮುಸ್ಲಿಂ ಗಂಡನೊಂದಿಗೆ ವಾಸಿಸಲು ಪಾಕಿಸ್ತಾನ ನ್ಯಾಯಾಲಯವು ಅನುಮತಿ ನೀಡಿದೆ, ತಾನು ಹೊಸ ಧರ್ಮವನ್ನು ಸ್ವ ಇಚ್ಚೆಯಿಂದ ಸ್ವೀಕರಿಸಿರುವುದಾಗಿ ಹೇಳಿರುವ ಆಕೆ ತನ್ನ ಪೋಷಕರೊಂದಿಗೆ ತೆರಳಲು ನಿರಾಕರಿಸಿದ್ದಾಳೆ.
ಪ್ರಕರಣದ ವಿಚಾರಣೆ ಬಳಿಕ ಇಸ್ಲಾಮಾಬಾದ್ ಹೈ ಕೋರ್ಟ್ ನ ನ್ಯಾಯಮೂರ್ತಿ ಶೌಕತ್ ಅಜೀಜ್ ಸಿದ್ದಿಕಿ ಅವರು ದಂಪತಿಗಳಿಗೆ ಭದ್ರತೆಯನ್ನು ಒದಗಿಸಲು ಪೊಲೀಸರಿಗೆ ಸೂಚಿಸಿದರು.
ಇಸ್ಲಾಂಗೆ ಬಲವಂತವಾಗಿ ಮತಾಂತರಗೊಳಿಸಿದ್ದಲ್ಲದೆ, ಮುಸ್ಲಿಂ ವ್ಯಕ್ತಿಯೊಡನೆ ವಿವಹಕ್ಕಾಗಿ ಅವಳನ್ನು ಅಪಹರಿಸಿರುವುದಾಗಿ ಅಪಿಯೋಶಿ ಎಂಬ ಹಿಂದೂ ಹೆಸರಿನ ಮರಿಯಾ ಕುಟುಂಬದವರು ಆರೋಪಿಸಿದ್ದರು, ಎಂದು 'ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಆದಾಗ್ಯೂ, ಮಾರಿಯಾ,  ಇಸ್ಲಾಂಗೆ ತಾನು ಸ್ವ ಇಚ್ಚೆಯಿಂದ ಪರಿವರ್ತನೆ ಆಗಿದ್ದೇನೆ ಎಂದು ಹೇಳಿದ್ದಲ್ಲದೆ ನ್ಯಾಯಾಲಯದಲ್ಲಿ ಅರೇಬಿಕ್ ಪ್ರಾರ್ಥನೆ ಓದಿದರು, ಯಾರೂ ತನ್ನ ಧರ್ಮವನ್ನು ಬದಲಾಯಿಸುವಂತೆ ಒತ್ತಾಯಿಸಬಾರದು ಎಂದು, ಅವರು ಹೇಳಿದರು.
ಮಾರಿಯಾ ಅವರ ಪತಿ ಬಿಲಾವಾಲ್ ಅಲಿ ಭುಟ್ಟೊ ಅವರೊಂದಿಗೆ ಹೈ ಕೋರ್ಟ್ ನಿಂದ ರಕ್ಷಣೆ ಕೇಳಿದ್ದು ತಾವು ಸ್ವ ಇಚ್ಚೆಯಿಂದ ಒಟ್ತಾಗಿ ಜೀವಿಸಲು ನಮ್ಮ ಕುಟುಂಬದವರು ಬಿಡುವುದಿಲ್ಲ ಎನ್ನುವ ಭಯ ಇದೆ ಎಂದಿದ್ದರು. 
ಆಕೆಯ ಪೋಷಕರನ್ನು ಭೇಟಿಯಾಗಲು ಮಾರಿಯಾ ಅವರನ್ನು ನ್ಯಾಯಾಲಯ ಕೇಳಿದಾಗ, ಅವರು ನಿರಾಕರಿಸಿದರು. ಆದರೆ ನ್ಯಾಯಾಲಯದ ನಿರ್ದೇಶನದ ಮೇರೆಗೆ, ನ್ಯಾಯಾಧೀಶರ ವೈಯಕ್ತಿಕ ಕಾರ್ಯದರ್ಶಿ ಕಚೇರಿಯಲ್ಲಿ ಅವರು 40 ನಿಮಿಷಗಳ ಕಾಲ ತಮ್ಮ ಪೋಷಕರನ್ನು ಭೇಟಿಯಾದರು.
ಮಾರಿಯಾ ಅವರ ತಾಯಿ ನ್ಯಾಯಾಲಯಕ್ಕೆ ತನ್ನ ಮಗಳನ್ನು ತಮಗೆ ಹಸ್ತಾಂತರಿಸಬೇಕೆಂದು ಬೇಡಿಕೆ ಸಲ್ಲಿಸಿದಳು, ಸ್ವಲ್ಪ ಸಮಯದ ನಂತರ ಮರಿಯಾವನ್ನು ಭುಟ್ಟೋ ತ್ಯಜಿಸಬಹುದೆಂದು ಅವರು ಭಯ ವ್ಯಕ್ತಪಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.