ವಿದೇಶ

ಆಭರಣ, ಮೇಕ್ ಅಪ್ ಇಲ್ಲದ ಬಾಂಗ್ಲಾದೇಶ ವಧುವಿನ ಚಿತ್ರ, ಸಾಮಾಜಿಕ ತಾಣದಲ್ಲಿ ವೈರಲ್

ಬಾಂಗ್ಲಾದೇಶದ ನವವಧು ಒಬ್ಬರು ಮೇಕ್ ಅಪ್ ಹಾಗೂ ಯಾವುದೇ ಆಭರಣ ಧರಿಸದ ತನ್ನ ಫೋಟೊವೊಂದನ್ನು ಸಾಮಾಜಿಕ...

ಆಭರಣ, ಮೇಕ್ ಅಪ್ ಇಲ್ಲದ ಬಾಂಗ್ಲಾದೇಶ ವಧುವಿನ ಚಿತ್ರ, ಸಾಮಾಜಿಕ ತಾಣದಲ್ಲಿ ವೈರಲ್
ಪತಿಯೊಂದಿಗೆ ವದು ಜರಾ
Published On :
ಢಾಕಾ: ಬಾಂಗ್ಲಾದೇಶದ ನವವಧು ಒಬ್ಬರು ಮೇಕ್ ಅಪ್ ಹಾಗೂ ಯಾವುದೇ ಆಭರಣ ಧರಿಸದ ತನ್ನ ಫೋಟೊವೊಂದನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದು, ಇದು ತೀವ್ರ ಚರ್ಚೆಗೆ ಕಾರಣವಾಗಿದೆ.
ಬಡವರಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸುವುದಕ್ಕಾಗಿ ಚಾರಿಟಿಯೊಂದನ್ನು ನಡೆಸುತ್ತಿರುವ ತಸ್ನಿಮಾ ಜರಾ ಅವರು ತಮ್ಮ ಅಜ್ಜಿಯ ಕಾಟನ್ ಸೀರೆ ಧರಿಸಿ ಯಾವುದೇ ಆಭರಣ ಧರಿಸದೆ ಮತ್ತು ಮೇಕ್ ಇಲ್ಲದ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ. ಅಲ್ಲದೆ ಮದುವೆ ದಿನದಂದು ವಧು ವ್ಯಾಪಕ ಬಂಗಾರ ಧರಿಸಬೇಕು ಎಂಬ ದೃಷ್ಟಿಕೋನವನ್ನು ಬದಲಾಯಿಸಬೇಕು ಎಂದು ಬರೆದುಕೊಂಡಿದ್ದಾಳೆ.
ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಜರಾ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ನಾನು ನನ್ನ ಅಜ್ಜಿಯ ಕಾಟನ್ ಸೀರೆ ಧರಿಸಿ ಯಾವುದೇ ಮೇಕ್ ಅಪ್ ಮತ್ತು ಆಭರಣವಿಲ್ಲದೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಏಕೆ ಹೀಗೆ ಮಾಡಿದೆ ಎಂದು ಹಲವರು ನನ್ನನ್ನು ಪ್ರಶ್ನಿಸಿದ್ದಾರೆ. ಆದರೆ ವಧುವಿನ ಈ ಅದ್ಧೂರಿತನ ಚಿತ್ರವೂ ನಮ್ಮ ಕುಟುಂಬದ ಆರ್ಥಿಕ ಶಕ್ತಿ ಮತ್ತು ಯೋಗಕ್ಷೇಮವನ್ನು ಪ್ರತಿನಿಧಿಸುವುದಿಲ್ಲ ಎಂದಿದ್ದಾರೆ.
ತಸ್ನಿನ್ ಜರಾ ಅವರು ಹಾಕಿದ ಈ ಸರಳ ಹಾಗೂ ಸುಂದರ ಫೋಟೋಗೆ 91 ಸಾವಿರ ಜನ ಲೈಕ್ ಮಾಡಿದ್ದಾರೆ ಮತ್ತು 24 ಸಾವಿರ ಜನ ಶೇರ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.