ವಿದೇಶ

ಡೋಕ್ಲಾಮ್ ವಿವಾದ: ನೆಹರೂ ಸರ್ಕಾರದಂತೆಯೇ ಮೋದಿ ಸರ್ಕಾರ ಕೂಡ ಅಪ್ರಬುದ್ಧ- ಚೀನಾ

ಡೋಕ್ಲಾಮ್ ನಲ್ಲಿ ಭಾರತೀಯ ಸೇನೆಯ ಆಕ್ರಮಣ ನಡೆಸಿರುವ ಬಗ್ಗೆ ಮತ್ತೊಮ್ಮೆ ಕಿಡಿಕಾರಿರುವ ಚೀನಾ, 1962ರಲ್ಲಿ ಭಾರತದ ಜವಹರಲಾಲ್ ನೆಹರೂ ಅವರ ಸರ್ಕಾರದಂತೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಕೂಡ ಅಪ್ರಬುದ್ಧ ಸರ್ಕಾರವಾಗಿದೆ...

ಡೋಕ್ಲಾಮ್ ವಿವಾದ: ನೆಹರೂ ಸರ್ಕಾರದಂತೆಯೇ ಮೋದಿ ಸರ್ಕಾರ ಕೂಡ ಅಪ್ರಬುದ್ಧ- ಚೀನಾ
ಸಂಗ್ರಹ ಚಿತ್ರ
Published On :

ಬೀಜಿಂಗ್: ಡೋಕ್ಲಾಮ್ ನಲ್ಲಿ ಭಾರತೀಯ ಸೇನೆಯ ಆಕ್ರಮಣ ನಡೆಸಿರುವ ಬಗ್ಗೆ ಮತ್ತೊಮ್ಮೆ ಕಿಡಿಕಾರಿರುವ ಚೀನಾ, 1962ರಲ್ಲಿ ಭಾರತದ ಜವಹರಲಾಲ್ ನೆಹರೂ ಅವರ ಸರ್ಕಾರದಂತೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಕೂಡ ಅಪ್ರಬುದ್ಧ ಸರ್ಕಾರವಾಗಿದೆ ಎಂದು ಹೇಳಿಕೊಂಡಿದೆ. 

ಡೋಕ್ಲಾಮ್ ವಿವಾದ ಸಂಬಂಧ ಚೀನಾದ ಸರಕಾರಿ ಸ್ವಾಮ್ಯದ ಪತ್ರಿಕೆ "ಗ್ಲೋಬಲ್‌ ಟೈಮ್ಸ್‌' ಸಂಪಾದಕೀಯವೊಂದನ್ನು ಪ್ರಕಟಿಸಿದ್ದು, 1962ರಲ್ಲಿ ಭಾರತದ ಜವಾಹರಲಾಲ್ ನೆಹರೂ ಅವರ ಸರ್ಕಾರ ಯಾವ ರೀತಿ ಅಪ್ರಬುದ್ಧವಾಗಿತ್ತೋ ಅದೇ ರೀತಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಕೂಡ ಅಪ್ರಬುದ್ಧವಾಗಿದೆ ಎಂದು ಜರಿದಿದೆ. 

'ಚೀನಾಗೆ ಯುದ್ಧದ ರಿಸ್ಕ್ ಬೇಕಿಲ್ಲ' ಎಂಬ ಸಾಲಿನೊಂದಿಗೆ ಸಂಪಾದಕೀಯ ಪ್ರಾರಂಭಿಸಿರುವ ಚೀನಾ, ಎಂದಿನಂತೆ ವಿವಾದ ಸಂಬಂಧ ಭಾರತಕ್ಕೆ ಯುದ್ಧದ ಬೆದರಿಕೆ ಹಾಕುವುದನ್ನು ಮುಂದುವರೆಸಿದೆ. 

ಚೀನಾಗೆ ಯುದ್ಧ ಬೇಡ. ಆದರೆ, ಒಂದು ವೇಳೆ ಡೋಕ್ಲಾಮ್ ನಲ್ಲಿ ಭಾರತೀಯ ಸೇನೆಯ ಉಪಸ್ಥಿತಿ ಮುಂದುವರಿದರೆ ಕತೆ ಬೇರೆಯದೇ ಆಗುತ್ತದೆ. ಚೀನಾದ ಎಚ್ಚರಿಕೆಗಳನ್ನು ಹೀಗೆಯೇ ನಿರ್ಲಕ್ಷಿಸುತ್ತಲೇ ಹೋದರೆ, ಭಾರತದೊಂದಿಗೆ ಯುದ್ಧ ಮಾಡುವುದು ಖಚಿತ ಎಂದು ಹೇಳಿಕೊಂಡಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.