ಪಾಕಿಸ್ತಾನ ಸರ್ಕಾರದ ವೆಬ್ ಸೈಟ್ ಹ್ಯಾಕ್, ಭಾರತದ ರಾಷ್ಟ್ರಗೀತೆ ಹಾಕಿದ ಹ್ಯಾಕರ್
ಪಾಕಿಸ್ಥಾನ ಸರ್ಕಾರದ ಅಧಿಕೃತ ವೆಬ್‌ಸೈಟನ್ನುಗುರುವಾರ ಹ್ಯಾಕರ್‌ಗಳು ಹ್ಯಾಕ್ ಮಾಡಿರುವುದಾಗಿ ವರದಿಯಾಗಿದೆ.

Published On :
ಇಸ್ಲಾಮಾಬಾದ್: ಪಾಕಿಸ್ಥಾನ ಸರ್ಕಾರದ ಅಧಿಕೃತ ವೆಬ್‌ಸೈಟನ್ನುಗುರುವಾರ ಹ್ಯಾಕರ್‌ಗಳು ಹ್ಯಾಕ್ ಮಾಡಿರುವುದಾಗಿ ವರದಿಯಾಗಿದೆ.
ವರದಿಗಳ ಪ್ರಕಾರ, ಹ್ಯಾಕ್ ಮಾಡಲ್ಪಟ್ಟ ಪಾಕಿಸ್ತಾನ ಸರ್ಕಾರದ ವೈಬ್ ಸೈಟಿನಲ್ಲಿ ಹ್ಯಾಕರ್‌ಗಳು ಭಾರತದ ರಾಷ್ಟ್ರ ಗೀತೆ ಮತ್ತು ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಹಾಕಿದ್ದಾರೆ.
ಪಾಕ್ ಸರ್ಕಾರಿ ವೆಬ್ ಸೈಟ್ ಹ್ಯಾಕಿಂಗ್ ಕೃತ್ಯದ ಮೂಲವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. ಆದರೆ ಇದು ಭಾರತೀಯ ಹ್ಯಾಕರ್‌ಗಳ ಕೃತ್ಯವೆಂಬಂತೆ ಬಿಂಬಿಸಲಾಗಿದೆ.
ಕಳೆದ ಏಪ್ರಿಲ್ ನಲ್ಲಿ ಇಂತಹದ್ದೆ ಘಟನೆ ಭಾರತದಲ್ಲಿ ನಡೆದಿತ್ತು. ದೆಹಲಿ ವಿಶ್ವವಿದ್ಯಾಲಯ, ಅಲಿಘಡ್ ಮುಸ್ಲಿಂ ವಿಸ್ವವಿದ್ಯಾಲಯ, ಐಐಟಿ-ದೆಹಲಿ ಹಾಗೂ ಐಐಟಿ-ಬಿಎಚ್ ಯು ವೆಬ್ ಸೈಟ್ ಗಳನ್ನು ಹ್ಯಾಕಿ ಮಾಡಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆಗಳನ್ನು ಹಾಕಲಾಗಿತ್ತು. ಇದಾದ ಮೂರು ತಿಂಗಳ ನಂತರ ಹ್ಯಾಕರ್ ಗಳು ಪಾಕಿಸ್ತಾನದ ಸರ್ಕಾರಿ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


