ಆಫ್ಘಾನಿಸ್ತಾನದಲ್ಲೂ ಅಮೆರಿಕ ಸೇನೆ ದಾಳಿ: ಕೇರಳ ಮೂಲದ ಇಸಿಸ್ ಉಗ್ರನ ಸಾವು!
ಸಿರಿಯಾದಲ್ಲಿ ಅಮೆರಿಕ ಪಡೆಗಳ ದಾಳಿ ವೇಳೆ ಕೇರಳ ಮೂಲದ ಇಸಿಸ್ ಉಗ್ರ ಸಾವನ್ನಪ್ಪಿದ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಅಂತುಹುದೇ ಮಾಹಿತಿಯೊಂದಜು ಆಫ್ಘಾನಿಸ್ತಾನದಿಂದಲೂ ಕೇಳಿಬಂದಿದೆ.

ಕಾಬುಲ್: ಸಿರಿಯಾದಲ್ಲಿ ಅಮೆರಿಕ ಪಡೆಗಳ ದಾಳಿ ವೇಳೆ ಕೇರಳ ಮೂಲದ ಇಸಿಸ್ ಉಗ್ರ ಸಾವನ್ನಪ್ಪಿದ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಅಂತುಹುದೇ ಮಾಹಿತಿಯೊಂದಜು ಆಫ್ಘಾನಿಸ್ತಾನದಿಂದಲೂ ಕೇಳಿಬಂದಿದೆ.
ಆಫ್ಘಾನಿಸ್ತಾನದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಅಡಗುತಾಣಗಳ ಮೇಲೆ ಅಮೆರಿಕ ಸೇನಾಪಡೆಗಳು ವಾಯುದಾಳಿ ನಡೆಸಿದ್ದು, ಈ ವೇಳೆ ಹಲವು ಉಗ್ರರು ಹತರಾಗಿದ್ದಾರೆ. ಮೃತ ಉಗ್ರರ ಪೈಕಿ ಇತ್ತೀಚೆಗೆ ಕೇರಳದಿಂದ ನಾಪತ್ತೆಯಾಗಿದ್ದ ಯಹ್ಯಾ ಎಂಬ ಯುವಕ ಕೂಡ ಸೇರಿದ್ದು, ಈತ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯಲ್ಲಿ ಕಾರ್ಯನಿರತನಾಗಿದ್ದ ಎಂದು ತಿಳಿದುಬಂದಿದೆ.
ಯಹ್ಯಾ ಸಾವಿನ ಸುದ್ದಿಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಟೆಲಿಗ್ರಾಮ್ ಮೂಲಕ ಆತನ ಸಂಬಂಧಿಕರಿಗೆ ನೀಡಿದ್ದು, ಅಮೆರಿಕ ಪಡೆಗಳ ವಿರುದ್ಧ ಹೋರಾಡುವಾಗ ಯಹ್ಯಾ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದೆ.
ಪ್ರಸ್ತುತ ಸಾವನ್ನಪ್ಪಿರುವ ಯಹ್ಯಾ ಇತ್ತೀಚೆಗೆ ಕೇರಳದಿಂದ ನಾಪತ್ತೆಯಾಗಿದ್ದ 21 ಮಂದಿಯ ಪೈಕಿ ಓರ್ವನಾಗಿದ್ದು, ಈತ ಕೇರಳದ ಪಾಲಕ್ಕಾಡ್ ಮೂಲದವನು ಎಂದು ಹೇಳಲಾಗುತ್ತಿದೆ. ಅಂತೆಯೇ ಈ ಎಲ್ಲ 21 ಮಂದಿಯೂ ಕೂಡ ಮಧ್ಯ ಪ್ರಾಚ್ಯಕ್ಕೆ ತೆರಳಿ ಅಲ್ಲಿ ಇಸ್ಲಾಂ ಮತಾಂತರಗೊಂಡು ಇಸಿಸ್ ಉಗ್ರ ಸಂಘಟನೆ ಸೇರಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


