ಪಾಕಿಸ್ತಾನದ ತಾಲೀಬಾನ್ ನಾಯಕನಿಗೆ ರಾ ರಕ್ಷಣೆ: ಉಗ್ರ ಸಂಘಟನೆಯ ಮಾಜಿ ವಕ್ತಾರ
ತಾಲೀಬಾನ್ ಉಗ್ರ ಸಂಘಟನೆಯ ವಿಘಟಿತ ಸಂಘಟನೆಯಾದ ಜಮಾತ್-ಉಲ್- ಅಹ್ರಾರ್(ಜೆಯುಎ) ಉಗ್ರ ಸಂಘಟನೆಯ ಮಾಜಿ ವಕ್ತಾರ ಎಹನ್ಸುಲ್ಲಾ ಎಹ್ಸಾನ್ ಹೇಳಿಕೆಯಿರುವ ವಿಡಿಯೋವನ್ನು ಪಾಕಿಸ್ತಾನ ಬಿಡುಗಡೆ...

Published On :
ಇಸ್ಲಾಮಾಬಾದ್: ತಾಲೀಬಾನ್ ಉಗ್ರ ಸಂಘಟನೆಯ ವಿಘಟಿತ ಸಂಘಟನೆಯಾದ ಜಮಾತ್-ಉಲ್- ಅಹ್ರಾರ್(ಜೆಯುಎ) ಉಗ್ರ ಸಂಘಟನೆಯ ಮಾಜಿ ವಕ್ತಾರ ಎಹನ್ಸುಲ್ಲಾ ಎಹ್ಸಾನ್ ಹೇಳಿಕೆಯಿರುವ ವಿಡಿಯೋವನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ.
ತಾಲೀಬಾನ್ ಉಗ್ರ ಸಂಘಟನೆಯ ಮುಖ್ಯಸ್ಥನಿಗೆ ರಾ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿರುವ ವಿಡಿಯೋ ದೃಶ್ಯವನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ. ಅಫ್ಘಾನಿಸ್ತಾನ ಹಾಗೂ ಭಾರತದ ಗುಪ್ತಚರ ಇಲಾಖೆಗಳಾದ ಎನ್ ಡಿಎಸ್ ಮತ್ತು ರಾ ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಪಾಕಿಸ್ತಾನಿ ತಾಲೀಬಾನ್ ಅಥವಾ ತೆಹ್ರೀಕ್-ಎ-ತಾಲೀಬಾನ್ ಪಾಕಿಸ್ತಾನ್ ಉಗ್ರ ಸಂಘಟನೆಗೆ ಹಣಕಾಸಿನ ನೆರವು ಹಾಗೂ ಅದರ ನಾಯಕನಿಗೆ ರಕ್ಷಣೆ ನೀಡುತ್ತಿವೆ ಎಂದು ಎಹನ್ಸುಲ್ಲಾ ಎಹ್ಸಾನ್ ಆರೋಪಿಸಿದ್ದಾನೆ.
ಎಹನ್ಸುಲ್ಲಾ ಎಹ್ಸಾನ್ ತಾಲೀಬಾನ್ ಉಗ್ರ ಸಂಘಟನೆಯ ವಿಘಟಿತ ಸಂಘಟನೆಯಾದ ಜಮಾತ್-ಉಲ್- ಅಹ್ರಾರ್(ಜೆಯುಎ) ಉಗ್ರ ಸಂಘಟನೆಯ ಮಾಜಿ ವಕ್ತಾರನಾಗಿದ್ದು, ಜೆಯುಎ ಉಗ್ರ ಸಂಘಟನೆ ಪಾಕಿಸ್ತಾನದಲ್ಲಿ ಕಳೆದ 2 ವರ್ಷಗಳಿಂದ ಪಾಕಿಸ್ತಾನದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಗಳಿಗೆ ಕಾರಣವಾಗಿದೆ.
ಎಹನ್ಸುಲ್ಲಾ ಎಹ್ಸಾನ್ ಹೇಳಿಕೆಯನ್ನೇ ಹಿಡಿದುಕೊಂಡು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಸೇನಾ ಮೇಜರ್ ಜನರಲ್ ಆಸೀಫ್ ಘಫೂರ್ "ಎಹನ್ಸುಲ್ಲಾ ಎಹ್ಸಾನ್ ಹೇಳಿಕೆ ಪಾಕಿಸ್ತಾನವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಯತ್ನಗಳನ್ನು ಬಯಲು ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaPakistanಪಾಕಿಸ್ತಾನTalibanವಕ್ತಾರತಾಲೀಬಾನ್Jamaatul Ahrar (JuA)Ehsanullah Ehsanಜಮಾತ್-ಉಲ್- ಅಹ್ರಾರ್ಎಹನ್ಸುಲ್ಲಾ ಎಹ್ಸಾನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


