ವಿಶ್ವಸಂಸ್ಥೆ: ಯೋಗ ದಿನಾಚರಣೆ ಅಂಗವಾಗಿ 'ಆಸನ'ಗಳ 10 ಅಂಚೆಚೀಟಿ ಬಿಡುಗಡೆ
ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲು ವಿಶ್ವಸಂಸ್ಥೆ ಸಿದ್ಧತೆ ನಡೆಸಿದ್ದು, ಯೋಗದ ಆಸನಗಳನ್ನು ಚಿತ್ರಿಸಿರುವ ಸ್ಟ್ಯಾಂಪ್ ಗಳನ್ನು ಬಿಡುಗಡೆ ಮಾಡಲು ವಿಶ್ವಸಂಸ್ಥೆ

Published On :
ವಿಶ್ವಸಂಸ್ಥೆ: ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲು ವಿಶ್ವಸಂಸ್ಥೆ ಸಿದ್ಧತೆ ನಡೆಸಿದ್ದು, ಯೋಗದ ಆಸನಗಳನ್ನು ಚಿತ್ರಿಸಿರುವ ಸ್ಟ್ಯಾಂಪ್ ಗಳನ್ನು ಬಿಡುಗಡೆ ಮಾಡಲು ವಿಶ್ವಸಂಸ್ಥೆ ನಿರ್ಧರಿಸಿದೆ.
ವಿಶ್ವಸಂಸ್ಥೆಯ ಪೋಸ್ಟಲ್ ಆಡಳಿತ ಈ ಬಗ್ಗೆ ತೀರ್ಮಾನ ಕೈಗೊಂಡಿದ್ದು, 1.15 ಡಾಲರ್ ಮುಖಬೆಲೆಯ ಸ್ಟ್ಯಾಂಪ್( ಅಂಚೆ ಚೀಟಿ) ಗಳಲ್ಲಿ ದೇವನಾಗರಿ ಭಾಷೆಯಲ್ಲಿ ಓಂ ಹಾಗೂ ಆಸನಗಳನ್ನು ಮುದ್ರಿಸಿ ಬಿಡುಗಡೆ ಮಾಡಲಿದೆ.
2016 ರಲ್ಲಿ ವಿಶ್ವಸಂಸ್ಥೆಯ ಪೋಸ್ಟಲ್ ಆಡಳಿತ, ಯುಎನ್ ಪಿಎ ಎಂಎಸ್ ಸುಬ್ಬಲಕ್ಷ್ಮಿ ಅವರಿಗೆ ಗೌರವ ಸೂಚಿಸಲು ಹಾಗೂ 1966 ರಲ್ಲಿ ವಿಶ್ವಸಂಸ್ಥೆಯಲ್ಲಿ ನಡೆದಿದ್ದ ಸುಬ್ಬಲಕ್ಷ್ಮಿ ಅವರ ಕಾನ್ಸರ್ಟ್ ನ 50 ನೇ ವರ್ಷಾಚರಣೆಗಾಗಿ ಸ್ಟ್ಯಾಂಪ್ ನ್ನು ಬಿಡುಗಡೆ ಮಾಡಿತ್ತು.
ಈ ಬಾರಿ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಯೋಗಾ ಸ್ಟ್ಯಾಂಪ್ ಗಳನ್ನು ಬಿಡುಗಡೆ ಮಾಡಲು ವಿಶ್ವಸಂಸ್ಥೆ ನಿರ್ಧರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ವಿಶ್ವಸಂಸ್ಥೆInternational Yoga Dayಅಂತಾರಾಷ್ಟ್ರೀಯ ಯೋಗ ದಿನಾಚರಣೆyoga asanasstampsUN Postal Administrationಯೋಗ ಆಸನಸ್ಟ್ಯಾಂಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


