ನೇರ ಪ್ರಸಾರದ ವೇಳೆ ಪೆನ್ ಜತೆ ಆಟವಾಡುತ್ತಾ ನಗೆಗೀಡಾದ ಸುದ್ದಿ ವಾಚಕಿ
ಆಸ್ಟ್ರೇಲಿಯಾದ ಟಿವಿ ನಿರೂಪಕಿಯೊಬ್ಬರು ವಿರಾಮದ ವೇಳೆ ಮೈಮೆರೆತಿದ್ದು ನೇರ ಪ್ರಸಾರವಾದರೂ ಗೊತ್ತಿಲ್ಲದೆ ಪೆನ್ ಜತೆ ಆಟವಾಡಿ ನಂತರ ನೇರ...

Published On :
ನವದೆಹಲಿ: ಆಸ್ಟ್ರೇಲಿಯಾದ ಟಿವಿ ನಿರೂಪಕಿಯೊಬ್ಬರು ವಿರಾಮದ ವೇಳೆ ಮೈಮೆರೆತಿದ್ದು ನೇರ ಪ್ರಸಾರವಾದರೂ ಗೊತ್ತಿಲ್ಲದೆ ಪೆನ್ ಜತೆ ಆಟವಾಡಿ ನಂತರ ನೇರ ಪ್ರಸಾರವಾಗುತ್ತಿರುವುದನ್ನು ಕಂಡು ಬೆಸ್ತು ಬಿದ್ದಿದ್ದಾರೆ.
ಎಬಿಸಿ 24 ಟಿವಿ ಚಾನಲ್ ನಲ್ಲಿ ಟಿವಿ ವಾಚಕಿಯಾಗಿ ಕೆಲಸ ಮಾಡುತ್ತಿರುವ ನತಾಶ ಸಂಜೆ ಸುದ್ದಿ ಬುಲೆಟಿನ್ ಓದುತ್ತಿದ್ದರು. ಒಂದು ಸುದ್ದಿ ಓದಿ ಅದು ಪ್ರಸಾರವಾಗುತ್ತಿರುವಾಗ ನತಾಶ ಕೂತಲ್ಲೇ ಮೈಮರೆತು ಪೆನ್ ಹಿಡಿದು ಆಟವಾಡುಲು ಪ್ರಾರಂಭಿಸಿದ್ದು ಅಷ್ಟರಲ್ಲೇ ಸುದ್ದಿ ಪ್ರಸಾರ ಮುಕ್ತಾಯವಾಗಿ ನೇರ ಪ್ರಸಾರ ಬಂದಾಗಲೂ ಆಕೆ ಗೊತ್ತಿಲ್ಲದಂತೆ ಕುಳಿತಿರುವ ವಿಡಿಯೋ ಇದೀಗ ವೀಕ್ಷಕರಿಗೆ ಮನರಂಜನೆ ನೀಡಿದೆ.
ನಂತರ ನೇರ ಪ್ರಸಾರವಾಗುತ್ತಿರುವುದು ಅರಿವಾಗಿ ಬೆಚ್ಚಿಬಿದ್ದ ನಶಾತ ತಕ್ಷಣ ಸಾವರಿಸಿಕೊಂಡು ಇನ್ನು ಮುಂದೆ ಕ್ರೀಡಾ ಸುದ್ದಿಗಳು ಎಂದು ಘೋಷಿಸಿ ಇನ್ನೊಬ್ಬ ನಿರೂಪಕಿಗೆ ಕಾರ್ಯಕ್ರಮ ಪಾಸ್ ಮಾಡಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


