ಸ್ವೀಡನ್ ನಲ್ಲಿ ಅಂಗಡಿಯೊಂದಕ್ಕೆ ನುಗ್ಗಿದ ಟ್ರಕ್, 3 ಸಾವು, ಉಗ್ರರ ದಾಳಿ ಶಂಕೆ
ಸ್ವೀಡನ್ ನ ಸೆಂಟ್ರಲ್ ಸ್ಟಾಕ್ ಹೋಮ್ ನಲ್ಲಿ ಶುಕ್ರವಾರ ಲಾರಿಯೊಂದು ಡಿಪಾರ್ಟ್ ಮೆಂಟ್ ಸ್ಟೋರ್ ಗೆ ನುಗ್ಗಿದ್ದು, ಘಟನೆಯಲ್ಲಿ....

Published On :
ಸ್ಟಾಕ್ ಹೋಮ್: ಸ್ವೀಡನ್ ನ ಸೆಂಟ್ರಲ್ ಸ್ಟಾಕ್ ಹೋಮ್ ನಲ್ಲಿ ಶುಕ್ರವಾರ ಲಾರಿಯೊಂದು ಡಿಪಾರ್ಟ್ ಮೆಂಟ್ ಸ್ಟೋರ್ ಗೆ ನುಗ್ಗಿದ್ದು, ಘಟನೆಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಭಾರತೀಯ ರಾಯಭಾರ ಕಚೇರಿ ಸಮೀಪದಲ್ಲಿರು ಕ್ವೀನ್ಸ್ ಸ್ಟ್ರೀಟ್ ನ ಜನನಿಬಿಡ ಪ್ರದೇಶದಲ್ಲೇ ಈ ಘಟನೆ ನಡೆದಿದ್ದು, ಇದು ಉಗ್ರರ ದಾಳಿಯಾಗಿರುವ ಸಾಧ್ಯತೆ ಇದೆ ಎಂದು ಸ್ವೀಡನ್ ಪ್ರಧಾನಿ ಸ್ಟೆಫನ್ ಲೋಫ್ವೆನ್ ಅವರು ಶಂಕೆ ವ್ಯಕ್ತಪಿಡಿಸಿದ್ದಾರೆ.
ಸ್ವೀಡನ್ ಮೇಲೆ ದಾಳಿ ನಡೆದಿದ್ದು, ಇದು ಉಗ್ರರ ಕೃತ್ಯ ಎಂದು ಸ್ಪಷ್ಟವಾಗಿ ತಿಳಿಯುತ್ತಿದೆ ಎಂದು ಲೊಫ್ವೆನ್ ಅವರು ಹೇಳಿದ್ದಾರೆ.
ಘಟನೆಯಲ್ಲಿ ಮೂವರು ಮೃತಪಟ್ಟಿರುವುದಾಗಿ ಸ್ಡೀಡಿಶ್ ರೆಡಿಯೋ ವರದಿ ಮಾಡಿದೆ. ಹಲವು ಜನ ಗಾಯಗೊಂಡಿದ್ದಾರೆ ಎಂದು ಗುಪ್ತಚರ ಸಂಸ್ಥೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


