ವಿದೇಶ

ಆ್ಯಪಲ್ ಶೋ ರೂಂ ಗೆ ನುಗ್ಗಿ ಐ-ಫೋನ್ ಗಳನ್ನು ಧ್ವಂಸ ಮಾಡಿದ ವ್ಯಕ್ತಿ

ಕೋಪಗೊಂಡ ವ್ಯಕ್ತಿಯೊಬ್ಬ ಅಂಗಡಿಗೆ ನುಗ್ಗಿ ಹಲವು ಆ್ಯಪಲ್ ಐ ಫೋನ್ ಗಳನ್ನು ಒಡೆದು ಹಾಕಿದ ಘಟನೆ ಪ್ಯಾರಿಸ್ ನ ಡಿಜೋನ್ ನಗರದಲ್ಲಿ ...

ಆ್ಯಪಲ್ ಶೋ ರೂಂ ಗೆ ನುಗ್ಗಿ ಐ-ಫೋನ್ ಗಳನ್ನು ಧ್ವಂಸ ಮಾಡಿದ ವ್ಯಕ್ತಿ
ಸಾಂದರ್ಭಿಕ ಚಿತ್ರ
Published On :

ಪ್ಯಾರಿಸ್: ಕೋಪಗೊಂಡ ವ್ಯಕ್ತಿಯೊಬ್ಬ ಅಂಗಡಿಗೆ ನುಗ್ಗಿ ಹಲವು ಆ್ಯಪಲ್ ಐ ಫೋನ್ ಗಳನ್ನು ಒಡೆದು ಹಾಕಿದ ಘಟನೆ ಪ್ಯಾರಿಸ್ ನ ಡಿಜೋನ್ ನಗರದಲ್ಲಿ ನಡೆದಿದೆ.

ಕಣ್ಣಿಗೆ ಕಪ್ಪು ಕನ್ನಡದ ಧರಿಸಿದ್ದ ಆತ ಏಕಾ ಏಕಿ ಅಂಗಡಿಗೆ ನುಗ್ಗಿ ತಾನು ತಂದಿದ್ದ ಸ್ಟೀಲ್ ಬಾಲ್ ನಿಂದ ಐ-ಫೋನ್ ಗಳ ಡಿಸ್ ಪ್ಲೇ ಅನ್ನು ಒಡೆದು ಹಾಕಿದ್ದಾನೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಸುಮಾರು 12 ಐ ಫೋನ್ ಗಳನ್ನು ಒಡೆದು ಹಾಕಿರುವ ದೃಶ್ಯ ಕ್ಯಾಮೆರಾದಲ್ಲಿ
ಸೆರೆಯಾಗಿದೆ. ಅಂಗಡಿಯಲ್ಲಿದ್ದ ಗ್ರಾಹಕರೊಬ್ಬರು ಈ ಘಟನೆಯನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

ತಾನು ಐ ಫೋನ್ ಒಡೆದು ಹಾಕುತ್ತಿರುವುದನ್ನು ಗಮನಿಸಿದ ವ್ಯಕ್ತಿ , ಕ್ಯಾಮೆರಾ ಮುಂದೆ ಬಂದು ತಾನು ಯಾಕೆ ಐ ಫೋನ್ ಒಡೆದು ಹಾಕುತ್ತಿದ್ದೇನೆ ಎಂಬುದಕ್ಕೆ ಕಾರಣ ನೀಡಿದ್ದಾನೆ.ಆ್ಯಪಲ್ ಕಂಪನಿ ಯೂರೋಪಿಯನ್ ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸಿದೆ, ನನ್ನ ಹಣವನ್ನು ವಾಪಸ್ ಕೊಡಲು ಅವರು ನಿರಾಕರಿಸಿದ್ದಾರೆ, ನಾನು ನನ್ನ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದೆ, ಆದರೆ ಅವರು ಆಗುವುದಿಲ್ಲ ಎಂದು ಹೇಳಿದ್ದರು. ಈಗ ಗೊತ್ತಾಯಿತಲ್ಲ ಏನಾಯಿತು ಎಂದು ಜೋರಾಗಿ ಕೂಗಿಕೊಂಡಿದ್ದಾನೆ. ಪ್ರಕರಣ ನಂತರ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.